ಕಪ್ಪುಹಣ ವಿರುದ್ಧ ಸಮರ: ಸ್ವಿಸ್ ಅಧ್ಯಕ್ಷರ ಜತೆ ಮೋದಿ ಚರ್ಚೆ

Update: 2017-09-01 04:19 GMT

ಹೊಸದಿಲ್ಲಿ, ಸೆ.1: ಕಪ್ಪುಹಣದ ವಿರುದ್ಧ ಸಮರ ಸಾರುವ ಹೊಸ ಮಾರ್ಗೋಪಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸ್ವಿಡ್ಜರ್‌ಲೆಂಡ್ ಅಧ್ಯಕ್ಷರ ಜತೆ ಚರ್ಚೆ ನಡೆಸಿದ್ದಾರೆ.

ಭಾರತಕ್ಕೆ ಭೇಟಿ ನೀಡಿರುವ ಸ್ವಿಸ್ ಅಧ್ಯಕ್ಷ ದೋರಿಸ್ ಲೂಥರ್ಡ್ ಜತೆ ಈ ಬಗ್ಗೆ ಮಹತ್ವದ ಮಾತುಕತೆ ನಡೆಸಿರುವ ಮೋದಿ, ಎನ್‌ಎಸ್‌ಜಿ ಸದಸ್ಯತ್ವ ವಿಚಾರದಲ್ಲಿ ಬಾರತವನ್ನು ಬೆಂಬಲಿಸಿರುವ ಸ್ವಿಡ್ಜರ್‌ಲೆಂಡ್‌ಗ ಕೃತಜ್ಞತೆ ಸಲ್ಲಿಸಿದರು. ಭಾರತ ಸದಸ್ಯತ್ವದ ಮಹತ್ವ ಹಾಗೂ ಹವಾಮಾನ ಬದಲಾವಣೆ ತಡೆ ಮಾರ್ಗೋಪಾಯದ ಬಗ್ಗೆಯೂ ಮಾತುಕತೆ ನಡೆಸಿದರು.

ಹವಾಮಾನ ಬದಲಾವಣೆ ಎಲ್ಲ ದೇಶಗಳಿಗೆ ಪ್ರಮುಖ ಸವಾಲು. ಸಮಾನ, ಆದರೆ ವಿಭಿನ್ನ ಹೊಣೆಗಾರಿಕೆಯ ತತ್ವದಡಿ, ಪ್ಯಾರೀಸ್ ಒಪ್ಪಂದದ ಚೌಕಟ್ಟನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ದೇಶಗಳ ಜತೆಗೆ ಒಗ್ಗೂಡಿ ರೂಪಿಸಲು ನಾವು ಬದ್ಧರಿದ್ದೇವೆ. ಭಾರತ ಕೂಡಾ ಸ್ವಚ್ಛ ಇಂಧನದ ಅಗತ್ಯತೆಯನ್ನು ಪೂರೈಸುವ ಬದ್ಧತೆ ಹೊಂದಿದೆ. ಇದಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೆರವಾಗಲಿದೆ ಎಂದು ಮೋದಿ ವಿವರಿಸಿದರು.

ಇದೇ ಸಂದರ್ಭ ಧೀರ್ಘಕಾಲದಿಂದ ಬಾಕಿ ಇರುವ ಭಾರತ ಹಾಗೂ ನಾಲ್ಕು ಯೂರೋಪಿಯನ್ ದೇಶಗಳ ನಡುವಿನ ಮುಕ್ತ ವ್ಯಾಪಾರ ವಿಧಿವಿಧಾನಗಳನ್ನು ಅಂತಿಮಪಡಿಸುವಂತೆ ಸ್ವಿಸ್ ಅಧ್ಯಕ್ಷರು ಒತ್ತಾಯಿಸಿದರು. ದ್ವಿಪಕ್ಷೀಯ ಹೂಡಿಕೆ ಸುರಕ್ಷೆ ಒಪ್ಪಂದದ ಅನಿವಾರ್ಯತೆಯನ್ನೂ ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News