×
Ad

ನೀವು ಅತ್ಯಂತ ಸುಲಭವಾಗಿ ವೀಸಾ ಪಡೆಯಬಹುದಾದ ವಿಶ್ವದ ಐದು ದೇಶಗಳಿವು

Update: 2017-09-01 17:27 IST

ಅಮೆರಿಕ ಅಥವಾ ಬ್ರಿಟನ್‌ನಂತಹ ಶ್ರೀಮಂತ ದೇಶಗಳಿಗೆ ಭೇಟಿ ನೀಡಲು ಅವುಗಳ ವೀಸಾ ಪಡೆಯುವಲ್ಲಿನ ಕಷ್ಟ ಅನುಭವಿಸಿದವರಿಗೇ ಗೊತ್ತು. ಇತರ ದೇಶಗಳ ವೀಸಾಗಳನ್ನು ಪಡೆಯುವುದೂ ಅಷ್ಟು ಸುಲಭವಲ್ಲ. ಆದರೆ ಈ ಐದು ದೇಶಗಳ ವೀಸಾಗಳನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

                                       ಅಝರ್‌ಬೈಜಾನ್

 ತೀರ ಇತ್ತೀಚಿನವರೆಗೂ ಅಝರ್‌ಬೈಜಾನ್‌ಗೆ ತೆರಳಲು ವೀಸಾ ಪಡೆಯಲು ಒದ್ದಾಡಬೇಕಿತ್ತು. ವೀಸಾ ಪಡೆಯುವುದು ಸುದೀರ್ಘ ಕಾಲದ ಮತ್ತು ಭಾರೀ ಹಿಂಸೆಯ ಪ್ರಕ್ರಿಯೆಯಾಗಿತ್ತು ಮತ್ತು ವೀಸಾ ಲಭಿಸುತ್ತದೆ ಎನ್ನುವ ಖಾತರಿಯೂ ಇರುತ್ತಿರಲಿಲ್ಲ. ಆದರೆ ಇ-ವೀಸಾ ಜಾರಿಗೊಳಿಸುವ ಮೂಲಕ ಅಲ್ಲಿಯ ಅಧಿಕಾರಿಗಳು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಅಝರ್‌ಬೈಜಾನ್‌ಗೆ ವೀಸಾ ಪಡೆಯುವ ಪ್ರಕ್ರಿಯೆ ತುಂಬ ಸರಳವಾಗಿಬಿಟ್ಟಿದೆ. ಪ್ರತಿಯೊಂದೂ ಆನ್‌ಲೈನ್ ಮೂಲಕ ನಡೆಯುತ್ತದೆ ಮತ್ತು 2ರಿಂದ 4 ದಿನಗಳಲ್ಲಿ ವೀಸಾ ಕೈಸೇರುತ್ತದೆ. ವೀಸಾ ಶುಲ್ಕವನ್ನೂ ಗಣನೀಯವಾಗಿ ತಗ್ಗಿಸಲಾಗಿದೆ. ಕೇವಲ 20 ಡಾಲರ್ ಶುಲ್ಕ ತುಂಬಿದರೆ ಸಾಕು.

                                    ಕಾಂಬೋಡಿಯಾ

ಕಾಂಬೋಡಿಯಾ ಕೂಡ ಇ-ವೀಸಾ ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆ ಯನ್ನು ಸರಳಗೊಳಿಸಿದ್ದು, ತ್ವರಿತವಾಗಿ ಪಡೆಯಬಹುದಾಗಿದೆ. ಕೇವಲ 2-3 ದಿನಗಳಲ್ಲಿ ವೀಸಾ ಅರ್ಜಿಯು ಸಂಸ್ಕರಣಗೊಂಡು, ಅರ್ಜಿದಾರನ ಇ-ಮೇಲ್ ವಿಳಾಸಕ್ಕೆ ವೀಸಾ ರವಾನೆಯಾಗುತ್ತದೆ.

ಕಾಂಬೋಡಿಯಾಕ್ಕೆ ವಿಯೆಟ್ನಾಂ, ಲಾವೋಸ್ ಅಥವಾ ಥೈಲಂಡ್ ಮೂಲಕ ತೆರಳಬೇಕಿದೆಯೇ? ಸಮಸ್ಯೆಯಿಲ್ಲ, ಪ್ರಮುಖ ಬಾರ್ಡರ್ ಕ್ರಾಸಿಂಗ್‌ಗಳಲ್ಲಿ ಆಗಮನದ ವೇಳೆ ಕಾಂಬೋಡಿಯಾದ ವೀಸಾಗಳನ್ನು ಪಡೆಯಬಹುದಾಗಿದೆ.

                                        ಶ್ರೀಲಂಕಾ

 ನಿಮಗೆ ಶ್ರೀಲಂಕಾದ ಸುಂದರ ಬೀಚುಗಳು ಅಥವಾ ಅದರ ಪ್ರಸಿದ್ಧ ನ್ಯಾಷನಲ್ ಪಾರ್ಕ್‌ಗಳಿಗೆ ಭೇಟಿ ನೀಡುವ ಆಸಕ್ತಿಯಿದ್ದರೂ ಆ ರಾಷ್ಟ್ರಕ್ಕೆ ತೆರಳಲು ಹಿಂದೆಂದೂ ಈಗಿನಷ್ಟು ಸುಲಭವಾಗಿ ವೀಸಾ ದೊರೆಯುತ್ತಿರಲಿಲ್ಲ.

ಈಗ ಶ್ರೀಲಂಕಾ ವೀಸಾ ಪಡೆಯಲು ಆನ್‌ಲೈನ್ ಫಾರ್ಮ್ ತುಂಬಿ ‘ಎಂಟರ್’ ಒತ್ತಿದರೆ ಸಾಕು. ಯಾವುದೇ ಕಿರಿಕಿರಿಗಳು, ಸಂದರ್ಶನಗಳು ಅಥವಾ ಪತ್ರಗಳಿಲ್ಲದೆ 24 ಗಂಟೆಗಳಲ್ಲಿ ಇ-ವೀಸಾ ಲಭ್ಯವಾಗುತ್ತದೆ.

                       ತಜಿಕಿಸ್ಥಾನ್

ತಜಿಕಿಸ್ಥಾನ್ ಕಳೆದ ವರ್ಷ ಇ-ವೀಸಾಗಳನ್ನು ಜಾರಿಗೊಳಿಸಿದೆ. ಅರ್ಜಿ ಪ್ರಕ್ರಿಯೆಯು ಎಷ್ಟೊಂದು ಸರಳಗೊಂಡಿದೆಯೆಂದರೆ ನೀವು ಪಾಸ್‌ಪೋರ್ಟ್‌ನ ಪ್ರತಿಯೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಸಾಕು. ಸ್ಥಳೀಯ ತಜಿಕಿಸ್ಥಾನ್ ರಾಯಭಾರಿ ಕಚೇರಿಗೂ ತೆರಳಬೇಕಿಲ್ಲ. 1ರಿಂದ 3 ದಿನಗಳಲ್ಲಿ ನಿಮ್ಮ ವೀಸಾ ಸಿದ್ಧವಾಗುತ್ತದೆ. ಅದರ ಪ್ರಿಂಟ್ ತೆಗೆದುಕೊಂಡು ಪ್ರಯಾಣದ ವೇಳೆಗೆ ಜೊತೆಗೊಯ್ದರೆ ಸಾಕು.

                       ವಿಯೆಟ್ನಾಂ

15 ದಿನಗಳ ಅವಧಿಗೆ ವಿಯೆಟ್ನಾಂ ಪ್ರವಾಸ ಕೈಗೊಳ್ಳುವ ಬ್ರಿಟನ್ ಪ್ರಜೆಗಳಿಗೆ ವೀಸಾದ ಅಗತ್ಯವೇ ಇಲ್ಲ. ಅವರು ಆ ದೇಶವನ್ನು ತಲುಪಿದ ತಕ್ಷಣ ಅಲ್ಲಿಯೇ ದಾಖಲೆಗಳ ಮೇಲೆ ಎಂಟ್ರಿ ಸ್ಟಾಂಪ್ ಬೀಳುತ್ತದೆ. ಇಲ್ಲಿಯೂ ಇ-ವೀಸಾ ಜಾರಿಯಲ್ಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಒಂದೆರಡು ದಿನಗಳಲ್ಲಿ ವೀಸಾ ನಿಮ್ಮ ಕೈಯಲ್ಲಿರುತ್ತದೆ. ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿಯೇ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News