ಪಾಂಟಿಂಗ್ ದಾಖಲೆ ಸರಿಗಟ್ಟಿದ ಕೊಹ್ಲಿ
Update: 2017-09-03 22:08 IST
ಕೊಲಂಬೊ, ಸೆ.3: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಇಂದು 30ನೆ ಶತಕ ಪೂರ್ಣಗೊಳಿಸುವ ಮೂಲಕ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೊಹ್ಲಿ 107ಎಸೆತಗಳಲ್ಲಿ 8 ಬೌಂಡರಿ ನೆರವಿನಲ್ಲಿ ಶತಕ ಗಳಿಸಿದರು. ಇದು ಲಂಕಾ ವಿರುದ್ಧ 5ನೆ ಶತಕವಾಗಿದೆ ಪಾಂಟಿಂಗ್ 375 ಏಕದಿನ ಪಂದ್ಯಗಳಲ್ಲಿ ಈ ದಾಖಲೆ ಹೊಂದಿದ್ದಾರೆ.
ಕೊಹ್ಲಿ 194ನೇ ಪಂದ್ಯದಲ್ಲಿ 30ನೇ ಶತಕ ದಾಖಲಿಸಿದರು.