ಬ್ಲೂವೇಲ್ ಚಾಲೆಂಜ್: ಫೇಸ್‌ಬುಕ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ !?
ಅಹಮದಾಬಾದ್, ಸೆ. 3: ಬ್ಲೂವೇಲ್ ಚಾಲೆಂಜ್‌ನ ಗೀಳು ಅಂಟಿಸಿಕೊಂಡ 30 ವರ್ಷದ ವ್ಯಕ್ತಿಯೋರ್ವ ಕೊನೆಯ ಟಾಸ್ಕ್ ಪೂರ್ಣಗೊಳಿಸುವ ಮುನ್ನ ವಿಡಿಯೊ ಸೆರೆ ಹಿಡಿದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಇದು ಬ್ಲೂವೇಲ್ ಚಾಲೆಂಜ್‌ನಿಂದ ಸಂಭವಿಸಿರುವ ಆತ್ಮಹತ್ಯೆ ಎಂಬುದನ್ನು ನಿರಾಕರಿಸಿರುವ ಪೊಲೀಸರು, ಅವರು ಕ್ಯಾನ್ಸರ್ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಇಲ್ಲಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಶೋಕ್ ಮಾಲುನಾ ಬ್ಲೂವೇಲ್ ಚಾಲೆಂಜ್‌ನ ಅಂತಿಮ ಟಾಸ್ಕ್ ಪೂರೈಸಲು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಪೊಲೀಸರು ತಿಳಿಸಿದ್ದಾರೆ.
ಬನಸ್ಕಾಂತ್ ಜಿಲ್ಲೆ ಪಾಲನಪುರದ ನಿವಾಸಿ ಮಾಲುನಾ ಆಗಸ್ಟ್ 31ರಂದು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದರು. ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಬ್ಲೂವೇಲ್ ಚಾಲೆಂಜ್‌ನ ಅಂತಿಮ ಟಾಸ್ಕ್ ತಲುಪುತ್ತಿರುವುದರಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುವುದು ಕೇಳಿ ಬಂದಿದೆ.