×
Ad

ಯಮನ್: 6 ಲಕ್ಷ ಮಂದಿಗೆ ಕಾಲರಾ ಸೋಂಕು

Update: 2017-09-05 20:37 IST

ಜಿನೇವ, ಸೆ. 5: ಯಮನ್‌ನಲ್ಲಿ ಎಪ್ರಿಲ್‌ನಲ್ಲಿ ಕಾಲರಾ ರೋಗ ಕಾಣಿಸಿಕೊಂಡ ಬಳಿಕ ರೋಗದ ಸೋಂಕಿಗೊಳಗಾದವರ ಸಂಖ್ಯೆ 6,12,703ನ್ನು ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯಮನ್‌ನ ಆರೋಗ್ಯ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳು ಹೇಳಿವೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ 3,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ ಹಾಗೂ 2,048 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News