ಉತ್ತರ ಕೊರಿಯ: ರಾಜತಾಂತ್ರಿಕ ಪರಿಹಾರ ಅಗತ್ಯ: ಪುಟಿನ್
Update: 2017-09-05 22:39 IST
ಕ್ಸಿಯಾಮೆನ್ (ಚೀನಾ), ಸೆ. 5: ಉತ್ತರ ಕೊರಿಯದ ಪರಮಾಣು ಸಮಸ್ಯೆಗೆ ರಾಜತಾಂತ್ರಿಕ ಪರಿಹಾರವೊಂದನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಜಾಗತಿಕ ಅನಾಹುತ ಕಾದಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಎಚ್ಚರಿಸಿದ್ದಾರೆ.
ಪ್ಯಾಂಗ್‌ಯಾಂಗ್ ಮೇಲೆ ಇನ್ನಷ್ಟು ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
‘ಬ್ರಿಕ್ಸ್’ ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಪುಟಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.