ಗೌರಿ ಲಂಕೇಶ್ ಹತ್ಯೆ ಖಂಡಿಸಿ ‘ವೆಲ್ಫೇರ್ ಪಾರ್ಟಿ’ ಧರಣಿ

Update: 2017-09-06 07:15 GMT

ಮಂಗಳೂರು, ಸೆ.6: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾಅ ದ.ಕ. ಜಿಲ್ಲಾ ಸಮಿತಿಯು ಬುಧವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಮಧ್ಯೆ ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್‌ರ ಹತ್ಯೆಗೈಯಲಾಗಿದೆ. ಇದು ನಿಜಕ್ಕೂ ನಾಡಿನ ಜನತೆಗೆ ಆಘಾತಕಾರಿ ಅಂಶವಾಗಿದೆ. ಸರಕಾರ ತಕ್ಷಣ ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಶಿಕ್ಷೆಗೊಳಪಡಿಸದೇ ಇದ್ದರೆ ಪ್ರಗತಿಪರರು, ಬುದ್ಧಿಜೀವಿಗಳ ಬದುಕು ಆತಂಕಮಯವಾದೀತು ಎಂದು ಧರಣಿ ನಿರತರು ಹೇಳಿದರು.
ಡಬ್ಲುಪಿಐ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಜಿಲ್ಲಾಧ್ಯಕ್ಷ ಮೊಯಿನ್ ಕಮರ್, ಸಾರ್ವಜನಿಕ ಸಂಪರ್ಕಾಧಿಕಾರಿ ರಿಯಾಝ್ ಉಳ್ಳಾಲ, ಪಕ್ಷದ ಮುಖಂಡ ಹಾಗೂ ಪತ್ರಕರ್ತ ಅರಫಾ ಮಂಚಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News