×
Ad

ಪಲಾಯನಗೈಯುತ್ತಿದ್ದ ರೋಹಿಂಗ್ಯಾ ಮುಸ್ಲಿಮರ ಬೋಟ್ ಮುಳುಗಿ 5 ಮಕ್ಕಳು ಮೃತ್ಯು

Update: 2017-09-06 21:00 IST

ಹೊಸದಿಲ್ಲಿ, ಸೆ.6: ಹಿಂಸಾಚಾರ ಪೀಡಿತ ಮ್ಯಾನ್ಮಾರ್ ನಿಂದ ರೋಹಿಂಗ್ಯಾ ನಿರಾಶ್ರಿತರು ಪಲಾಯನಗೈಯುತ್ತಿದ್ದ ವೇಳೆ ಬೋಟ್ ಗಳು ಮುಳುಗಿ ಐದು ಮಕ್ಕಳು ಮೃತಪಟ್ಟಿದ್ದಾರೆ ಎಂದು ಬಾಂಗ್ಲಾದೇಶ ಗಡಿ ಭದ್ರತಾ ಪಡೆ ತಿಳಿಸಿದೆ.

ರಾಖೈನ್ ಹಾಗೂ ಬಾಂಗ್ಲಾದೇಶವನ್ನು ಪ್ರತ್ಯೇಕಿಸುವ ನಾಫ್ ನದಿಯಲ್ಲಿ 3ರಿಂದ ನಾಲ್ಕು ದೋಣಿಗಳು ಮುಳುಗಡೆಯಾಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಆಗಸ್ಟ್ 25ರಂದು ಆರಂಭವಾದ ಹಿಂಸಾಚಾರದಿಂದ ಹೆದರಿ ನಾಫ್ ಗಡಿಯನ್ನು ದಾಟುತ್ತಿದ್ದ ಹಲವರನ್ನು ಈಗಾಗಲೇ ಕೊಲ್ಲಲಾಗಿದೆ. ತೀವ್ರವಾಗಿ ಹರಿಯುತ್ತಿರುವ ನದಿಯನ್ನು ದಾಟಲು ಹಲವು ಬೇರೆ ದಾರಿ ಕಾಣದೆ ಸಣ್ಣ ಮೀನುಗಾರಿಕೆ ಬೋಟನ್ನು ಬಳಸುತ್ತಿದ್ದಾರೆ.

ರೋಹಿಂಗ್ಯಾ ನಿರಾಶ್ರಿತರು ತೆರಳುತ್ತಿದ್ದ 3ರಿಂದ 4 ಬೋಟ್ ಗಳು ಮುಳುಗಡೆಯಾಗಿದೆ. ಐದು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ಬಾಂಗ್ಲಾ ಗಡಿ ಅಧಿಕಾರಿ ಅಲೋಶಿಯಸ್ ಸಾಂಗ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News