×
Ad

ರೋಹಿಂಗ್ಯಾ ಮುಸ್ಲಿಮರಿಗೆ 10 ಸಾವಿರ ಟನ್ ಅಗತ್ಯ ಸಾಮಗ್ರಿ ಪೂರೈಕೆ: ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2017-09-06 21:27 IST

ಅಂಕಾರ, ಸೆ.6: ಮ್ಯಾನ್ಮಾರ್ ನಲ್ಲಿನ ಹಿಂಸಾಚಾರಕ್ಕೆ ಬೆದರಿ ಅಲ್ಲಿಂದ ಪಲಾಯನಗೈದಿರುವ ರೋಹಿಂಗ್ಯಾ ಮುಸ್ಲಿಮರಿಗೆ ಮಾನವೀಯ ನೆಲೆಯಲ್ಲಿ 10,000 ಟನ್ನುಗಳಷ್ಟು ಅಗತ್ಯ ಸಾಮಗ್ರಿಗಳನ್ನು ಟರ್ಕಿ ಪೂರೈಸಲಿದೆ ಎಂದು ದೇಶದ ಅಧ್ಯಕ್ಷ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

"ನಾನು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಜತೆ ಮಾತನಾಡಿದ್ದೇನೆ. ಈ ಕರೆಯ ನಂತರ ಅವರು ತಮ್ಮ ಬಾಗಿಲುಗಳನ್ನು ತೆರೆದರು'' ಎಂದು ಆಡಳಿತ ಎ ಕೆ ಪಾರ್ಟಿಯ ಸಭೆ ಅಂಕಾರದಲ್ಲಿ ನಡೆದಾಗ ಎರ್ದೊಗಾನ್ ಹೇಳಿದರು.

"ಟರ್ಕಿಯ ಏಡ್ ಏಜನ್ಸಿ ಟಿಕಾ ಈಗಾಗಲೇ 1,000 ಟನ್ನುಗಳಷ್ಟು ಅಗತ್ಯ ವಸ್ತುಗಳನ್ನು ನಿರಾಶ್ರಿತರ ಶಿಬಿರಗಳಿಗೆ ಒದಗಿಸುತ್ತಿದೆ. ಎರಡನೇ ಹಂತವಾಗಿ 10,000 ಟನ್ನುಗಳಷ್ಟು ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುವುದು'' ಎಂದು ಅವರು ಮಾಹಿತಿ ನೀಡಿದ್ದಾರೆ.

ಆಗಸ್ಟ್ 25ರಂದು ಹಿಂಸಾಚಾರ ಆರಂಭಗೊಂಡಂದಿನಿಂದ ವಾಯುವ್ಯ  ಮ್ಯಾನ್ಮಾರ್ ನಿಂದ ಬಾಂಗ್ಲಾದೇಶಕ್ಕೆ  ಸುಮಾರು 1.5 ಲಕ್ಷ ರೋಹಿಂಗ್ಯ ಮುಸ್ಲಿಮರು ಪಲಾಯನಗೈದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News