“ಬ್ಲೂವೇಲ್ ಚಾಲೆಂಜ್ ಎಂದರೆ ಸಾವಿನ ಬಲೆ”
Update: 2017-09-06 22:51 IST
ಕಾರೈಕಲ್, ಸೆ. 6: ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಗೇಮ್‌ನಿಂದ ರಕ್ಷಿಸಲಾದ ಕಾರೈಕಲ್‌ನ 27 ವರ್ಷದ ಯುವಕ ತನ್ನ ಭಯಂಕರ ಅನುಭವ ತೆರೆದಿಟ್ಟಿದ್ದಾನೆ. “ಇದು ಆ್ಯಪ್ ಅಥವಾ ಆಟವಲ್ಲ. ಸಾವಿನ ಬಲೆ” ಎಂದು ಹೇಳಿರುವ ಅವರು “ಯಾವುದೇ ಕಾರಣಕ್ಕೆ ಈ ಆಟ ಆಡಬೇಡಿ” ಎಂದಿದ್ದಾರೆ.
ಪೊಲೀಸರು ಮಂಗಳವಾರ ರಕ್ಷಿಸಿದ ಜಿಲ್ಲೆಯ ಕಾರೈಕಲ್‌ನ ನಿವಾಸಿ ಅಲೆಕ್ಸಾಂಡರ್‌ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಎರಡು ವಾರಗಳ ಹಿಂದೆ ನನ್ನ ಸಹೋದ್ಯೋಗಿಗಳು ರೂಪಿಸಿದ ವಾಟ್ಸ್ ಆ್ಯಪ್‌ನಿಂದ ಈ ಆಟದ ಲಿಂಕ್ ಪಡೆದುಕೊಂಡೆ. ರಜೆಯಲ್ಲಿ ಕಾರೈಕಲ್‌ಗೆ ಬಂದಾಗ ಈ ಆಟ ಆಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಇದು ಡೌನ್‌ಲೋಡ್ ಮಾಡುವ ಆ್ಯಪ್ ಅಥವಾ ಆಟ ಅಲ್ಲ. ಬದಲಾಗಿ ಬ್ಲೂವೇಲ್ ಅಡ್ಮಿನ್‌ಗೆ ಬೇಕಾದಂತೆ ವ್ಯಕ್ತಿಯೋರ್ವ ಆಟವಾಡುವ ಲಿಂಕ್. ನಾನು ಆಟ ಆಡಲು ಆರಂಭಿಸಿದ ಬಳಿಕ, ಚೆನ್ನೈಗೆ ಕೆಲಸಕ್ಕೆ ಹೋಗುವುದನ್ನು ಕೂಡ ಮರೆತಿದ್ದೆ ಎಂದು ಅವರು ಹೇಳಿದ್ದಾರೆ.