ಮಹಿಳೆಯ ಅತ್ಯಾಚಾರಗೈದು, ಆ್ಯಸಿಡ್ ಎರಚಿದ ಪ್ರಕರಣ: ಬಿಎಸ್‌ಎಫ್ ಯೋಧರ ಬಂಧನ

Update: 2017-09-06 17:28 GMT

ಮಿಜೋರಾಂ, ಸೆ. 6: ಮಾಮಿತ್ ಜಿಲ್ಲೆಯಲ್ಲಿ ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿ, ಆ್ಯಸಿಡ್ ಎರಚಿ, ಆಕೆಯ ಗೆಳತಿಯನ್ನು ಹತ್ಯೆ ಗೈದ ಆರೋಪದಲ್ಲಿ ಗಡಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾದೇಶ ಹಾಗೂ ತ್ರಿಪುರದ ಗಡಿ ಜಿಲ್ಲೆಯ ಸಿಲ್ಸರಿಯಲ್ಲಿ ನಿಯೋಜಿತರಾದ ಸ್ಥಳದಿಂದ ಈ ಇಬ್ಬರು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಮಾಮಿತ್ ಪೊಲೀಸ್ ಅಧೀಕ್ಷಕ ನಾರಾಯಣ್ ತಾಪಾ ಅವರು ತಿಳಿಸಿದ್ದಾರೆ.

ಈ ಇಬ್ಬರನ್ನು ಬಂಧಿಸಲು ಆರಂಭದಲ್ಲಿ ಬಿಎಸ್‌ಎಫ್‌ನ 181ನೇ ತುಕಡಿ ಅವಕಾಶ ನೀಡಲಿಲ್ಲ. ಜಿಲ್ಲಾ ನ್ಯಾಯಾಲಯ ಜಾಮೀನು ರಹಿತ ಬಂಧನ ಆದೇಶ ಜಾರಿಗೊಳಿಸಿದ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಅವರು ತಿಳಿಸಿದ್ದಾರೆ.

ಜುಲೈ 16ರಂದು ಚಾಕ್ಮಾ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಬಿಎಸ್‌ಎಫ್ ಯೋಧರು ಅತ್ಯಾಚಾರ ಎಸಗಿದ್ದರು. ಈ ಸಂದರ್ಭ ಮಹಿಳೆಯ ಗೆಳತಿ ಪರಾರಿಯಾಗಿದ್ದರು. ಆದರೆ, ಜುಲೈ 22ರಂದು ಅರಣ್ಯ ಪ್ರದೇಶದ ಸಮೀಪ ಗೆಳತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ತಾಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News