ತೆಲಂಗಾಣ ಶಾಸಕನ ಭಾರತದ ಪೌರತ್ವವನ್ನು ರದ್ದುಪಡಿಸಿದ ಗೃಹ ಸಚಿವಾಲಯ

Update: 2017-09-07 15:48 GMT

ಹೊಸದಿಲ್ಲಿ, ಸೆ.7: ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕನೊಬ್ಬನ ಪೌರತ್ವವನ್ನು ಕೇಂದ್ರ ಗೃಹ ಸಚಿವಾಲಯವು ತೆಗೆದುಹಾಕಿದೆ.

ಟಿಆರ್ ಎಸ್ ಶಾಸಕ ರಮೇಶ್ ಚೆನ್ನಮನೇನಿ ಜರ್ಮನಿಯ ಪಾಸ್ ಪೋರ್ಟ್ ಹೊಂದಿರುವ ವಿಚಾರ ಬೆಳಕಿಗೆ ಬಂದ ನಂತರ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ನಕಲಿ ದಾಖಲೆಗಳನ್ನು ಸಲ್ಲಿಸಿ ಈತ ಭಾರತದ ಪೌರತ್ವವನ್ನು ಪಡೆದಿದ್ದು, ಮೂರು ಬಾರಿ ಅಸೆಂಬ್ಲಿಗೆ ಆಯ್ಕೆಯಾಗಿದ್ದ. ರಮೇಶ್ ಜರ್ಮನಿಯ ಪ್ರಜೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕೋರ್ಟ್ ಹೇಳಿದ ನಂತರ ಭಾರತದ ಪೌರತ್ವವನ್ನು ತೆಗೆದು ಹಾಕಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಶಾಸಕ ಜರ್ಮನಿ ಪಾಸ್ ಪೋರ್ಟ್ ಹೊಂದಿರುವುದು, 12 ತಿಂಗಳುಗಳಿಂದ ಹೆಚ್ಚಿನ ಕಾಲ ಭಾರತದಲ್ಲಿ ನೆಲೆಸದಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

2009ರಲ್ಲಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದ ರಮೇಶ್ ವಿಧಾನಸಭೆಗೆ ಆಯ್ಕೆಯಾಗಿದ್ದ. ನಂತರ ಟಿಆರ್ ಎಸ್ ಪಕ್ಷವನ್ನು ಸೇರಿ ಅದೇ ಕ್ಷೇತ್ರದಿಂದ ಟಿಆರ್ ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News