ಲಾಲು, ತೇಜಸ್ವಿಗೆ ಸಿಬಿಐ ನೋಟಿಸ್
Update: 2017-09-07 22:36 IST
ಹೊಸದಿಲ್ಲಿ, ಸೆ. 6: ರೈಲ್ವೆಯ ಎರಡು ಹೊಟೇಲುಗಳ ನಿರ್ವಹಣಾ ಗುತ್ತಿಗೆಯನ್ನು ಪಾಟ್ನಾ ಮೂಲದ ಖಾಸಗಿ ಕಂಪೆನಿಗೆ ನೀಡುವಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪುತ್ರ ತೇಜಸ್ವಿ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಸೆಪ್ಟಂಬರ್ 11ರಂದು ಲಾಲು ಪ್ರಸಾದ್ ಹಾಗೂ ಸೆಪ್ಟಂಬರ್ 12ರಂದು ತೇಜಸ್ವಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸಿಬಿಐ ಆದೇಶಿಸಿದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ರೈಲ್ವೆಯ ಮಾಜಿ ಸಚಿವ ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.