ಉ.ಪ್ರ.ವಿಧಾನ ಪರಿಷತ್‌ಗೆ ಆದಿತ್ಯನಾಥ್ ಸೇರಿದಂತೆ ನಾಲ್ವರ ಅವಿರೋಧ ಆಯ್ಕೆ
Update: 2017-09-08 17:43 IST
ಲಕ್ನೋ,ಸೆ.8: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ ಪ್ರಸಾದ ವೌರ್ಯ ಮತ್ತು ದಿನೇಶ ಶರ್ಮಾ ಹಾಗೂ ಸಚಿವ ಸ್ವತಂತ್ರದೇವ್ ಸಿಂಗ್ ಅವರು ವಿಧಾನ ಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ಪ್ರಧಾನ ಕಾರ್ಯದರ್ಶಿ (ವಿಧಾನ ಸಭಾ) ಪ್ರದೀಪ ದುಬೆ ಅವರು ಶುಕ್ರವಾರ ಘೋಷಿಸಿದರು.
ಮೇಲ್ಮನೆಯಲ್ಲಿ ತೆರವಾಗಿದ್ದ ಐದು ಸ್ಥಾನಗಳಿಗೆ ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.
ಆದಿತ್ಯನಾಥ್ ಸೇರಿದಂತೆ ಈ ನಾಲ್ವರೂ ಮಂಗಳವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು.
ತನ್ಮಧ್ಯೆ ಶುಕ್ರವಾರ ನಡೆದ ಪರಿಶೀಲನೆಯಲ್ಲಿ ಇನ್ನೋರ್ವ ಸಚಿವ ಮೊಹ್ಸಿನ್ ರಝಾ ಅವರು ಸಲ್ಲಿಸಿರುವ ನಾಮಪತ್ರವು ಕ್ರಮಬದ್ಧವಾಗಿರುವುದು ಕಂಡುಬಂದಿದೆ ಎಂದು ದುಬೆ ತಿಳಿಸಿದರು.