ಯಾರೊಂದಿಗೂ ಚುನಾವಣಾ ಮೈತ್ರಿಯಿಲ್ಲ: ಅಮಿತ್ ಶಾ
ಹೊಸದಿಲ್ಲಿ,ಸೆ.7: ಮುಂದಿನ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾರೊಂದಿಗೂ ಮೈತ್ರಿಮಾಡಿಕೊಳ್ಳದೆ ಒಬ್ಬಂಟಿಯಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮಿಷನ್ 120 ಎನ್ನುವ ಗುರಿಯೊಂದಿಗೆ ಒಡಿಶಾದ 147 ಸ್ಥಾನಗಳಿಗೂ ಬಿಜೆಪಿ ಸ್ಪರ್ಧಿಸಲಿದೆ ಅಮಿತ್ ಶಾ ಹೇಳಿದರು. 2019ರಲ್ಲಿ ಒಡಿಶಾದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಕೇಂದ್ರಸರಕಾರ ಒಡಿಶಾಕ್ಕೆ 4 ಕೋಟಿ ರೂ. ಮಂಜೂರು ಮಾಡಿದೆ. ಆದರೆ ರಾಜ್ಯದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗಳು ಮೊಟಕುಗೊಂಡ ಸ್ಥಿತಿಯಲ್ಲಿದೆ. ಕೇಂದ್ರದ ಯೋಜನೆಯೊಂದಿಗೆ ಒಡಿಶಾದ ನವೀನ್ ಪಟ್ನಾಯಕ್‌ರ ಸರಕಾರ ಸಹಕರಿಸುವುದಿಲ್ಲ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
120ಸೀಟು ಗಳಿಸಿ ಒಡಿಶಾದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಕೆಲವರು ಭಾವಿಸುತ್ತಿದ್ದಾರೆ. ಆದರೆ ಬೇರೆ ಪಾರ್ಟಿಗಳ ನಾಯಕರಿಗೆ ವಯಸ್ಸಾಗುವಾಗ ಬಿಜೆಪಿಯಲ್ಲಿ ಯುವನಾಯಕರ ಸಾಲೇ ಇದೆ. ದೇಶವಿಡೀ ಬಿಜೆಪಿಅಲೆ ಇದೆ. ಬಿಜೆಪಿಯ ಮಿಷನ್ 120’ ಮೂಲಕ ಒಡಿಶಾದಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಎಂದು ಅಮಿತ್ ಶಾ ಹೇಳಿದರು.