×
Ad

ನೋಟ್ ರದ್ಧತಿಯನ್ನು ನನ್ನ ಮೇಲೆ ಹೇರಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ

Update: 2017-09-08 19:27 IST

ಹೊಸದಿಲ್ಲಿ, ಸೆ.8: ಕೇಂದ್ರ ಸರಕಾರವು ನೋಟ್ ರದ್ಧತಿಯನ್ನು ನನ್ನ ಮೇಲೆ ಹೇರಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ ಎಂದು ಆರ್ ಬಿಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ತನ್ನ ಪುಸ್ತಕ ‘ಐ ಡು ವಾಟ್ ಐ ಡು’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯ ವಿಷಯದಲ್ಲಿ ಒತ್ತಡ ಹೇರಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ. ಆದರೆ, ಅಂತಹ ನಿರ್ಧಾರವನ್ನು ಕಾರ್ಯಗತಗೊಳಿಸಬೇಕು ಎಂದಾದರೆ ಆರ್ ಬಿಐಯನ್ನು ಪರಿಗಣಿಸದೆ ಇರಲೂ ಕೇಂದ್ರ ಸರಕಾರಕ್ಕೆ ಸಾಧ್ಯವಿದೆ. 1978ರಲ್ಲೂ ಇದು ನಡೆದಿತ್ತು. ಸುಗ್ರೀವಾಜ್ಞೆಯ ಮೂಲಕ ಸರಕಾರ ನೋಟು ಅಮಾನ್ಯವನ್ನು ಜಾರಿಗೊಳಿಸಿತ್ತು. ಸರಕಾರವು ಆರ್ ಬಿಐಯನ್ನು ಸಂಪೂರ್ಣವಾಗಿ ಪರಿಗಣಿಸದೇ ಇರಲೂ ಸಾಧ್ಯವಿದೆ’ ಎಂದವರು ಹೇಳಿದರು.

“ಸರಕಾರಕ್ಕೆ ಆರ್ ಬಿಐನ ಒಪ್ಪಿಗೆಯ ಅಗತ್ಯವಿಲ್ಲ. ಆ ನಿರ್ಧಾರದೊಂದಿಗೆ ಮುಂದುವರಿಯಲು ಸರಕಾರ ಇಚ್ಛಿಸಿದ್ದರೆ ನನ್ನ ರಾಜೀನಾಮೆಯೇ ಕೊನೆಯ ಆಯ್ಕೆಯಾಗಿರುತ್ತಿತ್ತು” ಎಂದು ರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News