ಭಾರತೀಯ-ಅಮೆರಿಕನ್ ಮಹಿಳೆಗೆ ಪ್ರಮುಖ ಹುದ್ದೆ

Update: 2017-09-08 14:40 GMT

ವಾಶಿಂಗ್ಟನ್, ಸೆ. 8: ಭಾರತೀಯ ಅಮೆರಿಕನ್ ಮಹಿಳೆಯೊಬ್ಬರನ್ನು ವಿದೇಶಾಂಗ ಇಲಾಖೆಯ ಮಹತ್ವದ ಆಡಳಿತಾತ್ಮಕ ಹುದ್ದೆಯೊಂದಕ್ಕೆ ನೇಮಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ.

 ಹಾಲಿ ಸೆನೆಟರ್ ಡ್ಯಾನ್ ಸಲಿವಾನ್‌ರ ಮುಖ್ಯ ಸಲಹಾಗಾರ್ತಿ ಹಾಗೂ ಹಿರಿಯ ನೀತಿ ಸಲಹಾಕಾರ್ತಿ ಆಗಿರುವ ಮನೀಶಾ ಸಿಂಗ್, ಆರ್ಥಿಕ ವ್ಯವಹಾರಗಳ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಚಾರ್ಲ್ಸ್ ರಿವ್‌ಕಿನ್‌ರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಇದಕ್ಕೆ ಸೆನೆಟ್ ಅಂಗೀಕಾರ ನೀಡಬೆಕಾಗಿದೆ.

ಫ್ಲೋರಿಡಾ ನಿವಾಸಿಯಾಗಿರುವ 45 ವರ್ಷದ ಮನೀಶಾ ಆರ್ಥಿಕ, ಇಂಧನ ಮತ್ತು ವಾಣಿಜ್ಯ ವ್ಯವಹಾರಗಳ ಬ್ಯೂರೋದಲ್ಲಿ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News