ರೊಹಿಂಗ್ಯರಿಗೆ ತಾತ್ಕಾಲಿಕ ಆಶ್ರಯ ನೀಡಲು ಮಲೇಶ್ಯ ಮುಂದು

Update: 2017-09-08 16:59 GMT

ಕೌಲಾಲಂಪುರ, ಸೆ. 8: ಮ್ಯಾನ್ಮಾರ್‌ನಲ್ಲಿನ ಹಿಂಸೆಗೆ ಬೆದರಿ ಪಲಾಯನಗೈಯುತ್ತಿರುವ ರೊಹಿಂಗ್ಯ ಮುಸ್ಲಿಮರನ್ನು ಮಲೇಶ್ಯದ ತಟ ರಕ್ಷಣಾ ಪಡೆ ಹಿಂದಕ್ಕೆ ಕಳುಹಿಸುವುದಿಲ್ಲ ಹಾಗೂ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲು ಅದು ಸಿದ್ಧವಾಗಿದೆ ಎಂದು ಪಡೆಯ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಹೆಚ್ಚಿನ ಜನರು ನೂರಾರು ಕಿಲೋಮೀಟರ್ ದೂರದ ಮಲೇಶ್ಯಕ್ಕೆ ಬರುವ ಸಾಧ್ಯತೆ ಇದೆ ಎಂದು ಮಲೇಶ್ಯ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಏಜನ್ಸಿಯ ಮಹಾನಿರ್ದೇಶಕ ಝುಲ್ಕಿಫ್ಲಿ ಅಬುಬಕರ್ ತಿಳಿಸಿದರು.

ಮಲೇಶ್ಯದಲ್ಲಿ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ರೊಹಿಂಗ್ಯ ನಿರಾಶ್ರಿತರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News