×
Ad

ಮೃತರ ಸಂಖ್ಯೆ 1,000ಕ್ಕೂ ಹೆಚ್ಚು: ವಿಶ್ವಸಂಸ್ಥೆ ಪ್ರತಿನಿಧಿ

Update: 2017-09-08 22:54 IST

ಸಿಯೋಲ್, ಸೆ. 8: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ 1,000ಕ್ಕೂ ಅಧಿಕ ಮಂದಿ ಈಗಾಗಲೇ ಮೃತಪಟ್ಟಿರಬಹುದು ಹಾಗೂ ಅವರ ಪೈಕಿ ಹೆಚ್ಚಿನವರು ರೊಹಿಂಗ್ಯ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂದು ವಿಶ್ವಸಂಸ್ಥೆಯ ಹಿರಿಯ ಪ್ರತಿನಿಧಿಯೊಬ್ಬರು ಶುಕ್ರವಾರ ಎಎಫ್‌ಪಿ ಸುದ್ಧಿ ಸಂಸ್ಥೆಗೆ ತಿಳಿಸಿದರು.

ಇದು ಮ್ಯಾನ್ಮಾರ್ ಸರಕಾರ ನೀಡಿರುವ ಮೃತರ ಸಂಖ್ಯೆಯ ದುಪ್ಪಟ್ಟಾಗಿದೆ.

‘‘ಬಹುರ್ಶ ಒಂದು ಸಾವಿರ ಅಥವಾ ಅದಕ್ಕೂ ಅಧಿಕ ಮಂದಿ ಈಗಾಗಲೇ ಹತರಾಗಿದ್ದಾರೆ’’ ಎಂದು ಮ್ಯಾನ್ಮಾರ್‌ನಲ್ಲಿ ವಿಶ್ವಸಂಸ್ಥೆಯ ವಿಶೇಷ ಮಾನವಹಕ್ಕುಗಳ ಪ್ರತಿನಿಧಿ ಯಾಂಘೀ ಲೀ ತಿಳಿಸಿದರು.

‘‘ಇದರಲ್ಲಿ ಎರಡೂ ಕಡೆಗಳಲ್ಲಿ ಸತ್ತವರ ಸಂಖ್ಯೆ ಸೇರಿರಬಹುದು. ಆದರೆ ರೊಹಿಂಗ್ಯ ಸಮುದಾಯ ಇರುವ ಸ್ಥಳಗಳಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News