×
Ad

ಜಾತ್ಯತೀತರಿಗೂ ಭಾವನೆಗಳಿವೆ: ಜಾವೇದ್ ಅಖ್ತರ್

Update: 2017-09-08 23:32 IST

ಮುಂಬೈ, ಸೆ. 8: ಜಾತ್ಯತೀತರು ಹಾಗೂ ರಾಷ್ಟ್ರೀಯವಾದಿಗಳಿಗೂ ಭಾವನೆಗಳಿವೆ ಎಂದು

 ಜನಪ್ರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್, ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಜನರು ಆಗಾಗ ಹೇಳುತ್ತಿರುತ್ತಾರೆ. ಜಾತ್ಯತೀತರು ಹಾಗೂ ರಾಷ್ಟ್ರವಾದಿಗಳಿಗೂ ಭಾವನೆಗಳಿವೆ ಎಂದು ಅವರು ಹೇಳಿದ್ದಾರೆ.

ಪುಣೆ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದ ಮೊದಲ ದಿನದ ‘ಮೈ ಸ್ಟೋರಿ, ಅವರ್ ಸ್ಟೋರಿ’ ಅಧಿವೇಶನದಲ್ಲಿ ಪತ್ನಿ ಹಾಗೂ ನಟಿ ಶಬ್ನಾ ಅಜ್ಮಿಯೊಂದಿಗೆ ಅಖ್ತರ್ ಪಾಲ್ಗೊಂಡರು.

 ಈ ಅಧಿವೇಶನದಲ್ಲಿ ಅಖ್ತರ್ ಹಾಗೂ ಅಜ್ಮಿ ಜಾತ್ಯತೀತ ವಾತಾವರಣ ರೂಪಿಸುವ ಬಗ್ಗೆ ತಮ್ಮ ನಿಲುವುಗಳನ್ನು ಹಂಚಿಕೊಂಡರು.

ಜಾತ್ಯತೀತವಾದ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಎಲ್ಲವೂ ಮುಖ್ಯವಾದ ಮೌಲ್ಯಗಳು. ನಾವು ಇದನ್ನು ಕಲಿಯುತ್ತಾ ಬೆಳೆಯಬೇಕು. ಈ ಮೌಲ್ಯಗಳು ನಮ್ಮ ಡಿಎನ್‌ಎಯ ಭಾಗ. ಈ ಮೌಲ್ಯಗಳನ್ನು ದುರ್ಬಲಗೊಳಿಸಿದಾಗ ನಮಗೆ ನೋವಾಗುತ್ತದೆ ಎಂದು ಅವರು ಹೇಳಿದರು.

 ರಾಷ್ಟ್ರವಾದದ ಪರಿಕಲ್ಪನೆ ನನ್ನ ಸಮಗ್ರ ಬದುಕಿನ ಒಂದು ಭಾಗ ಎಂದು ಹೇಳಿದ ಜಾವೇದ್ ಅಖ್ತರ್, ಇಂದು ರಾಷ್ಟ್ರಗೀತೆ ಹಾಡಿದಾಗ ಜನರು ಎದ್ದು ಹೋಗುವುದನ್ನು ನಾನು ನೋಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News