×
Ad

ಸೇನಾ ಪೊಲೀಸ್‌ಗೆ 800 ಮಹಿಳೆಯರ ಸೇರ್ಪಡೆ

Update: 2017-09-08 23:49 IST

ಹೊಸದಿಲ್ಲಿ, ಸೆ. 8: ಸೇನಾ ಪೊಲೀಸ್‌ಗೆ ಮಹಿಳೆಯರ ಸೇರ್ಪಡೆ ಯೋಜನೆಯನ್ನು ಸೇನೆ ಅಂತಿಮಗೊಳಿಸಿದೆ ಎಂದು ಸೇನೆಯ ಹಿರಿಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ.

ಸೇನೆಯಲ್ಲಿ ಲಿಂಗ ತಾರತಮ್ಯ ನಿವಾರಿಸುವ ದಿಶೆಯಲ್ಲಿ ಇದು ದೊಡ್ಡ ಹೆಜ್ಜೆಯಾಗಲಿದೆ. ಪ್ರತಿವರ್ಷ 52 ಸಿಬ್ಬಂದಿಯಂತೆ ಒಟ್ಟು 800 ಮಹಿಳೆಯರನ್ನು ಸೇನಾ ಪೊಲೀಸ್‌ಗೆ ಸೇರ್ಪಡೆಗೊಳಿಸಲಾಗುವುದು ಎಂದು ಸೇನಾಧಿಕಾರಿ ಅಶ್ವನಿ ಕುಮಾರ್ ತಿಳಿಸಿದ್ದಾರೆ.

ಸೇನಾ ಪೊಲೀಸ್‌ಗೆ ಮಹಿಳೆಯರನ್ನು ನಿಯೋಜಿಸುವುದರಿಂದ ಲಿಂಗಾಧಾರಿತ ಅಪರಾಧದ ತನಿಖೆಗೆ ಸಹಾಯಕವಾಗಬಹುದು ಎಂದು ಕುಮಾರ್ ಹೇಳಿದ್ದಾರೆ.

ಪ್ರಸ್ತುತ ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಎಂಜಿನಿಯರಿಂಗ್‌ನಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News