ಸಂಸದ ನಳಿನ್ ವರ್ತನೆ ನಾಚಿಕೆಗೇಡು: ಐವನ್ ಡಿಸೋಜ

Update: 2017-09-09 08:13 GMT

ಮಂಗಳೂರು, ಸೆ.9: ಕದ್ರಿ ಠಾಣಾ ಇನ್‌ಸ್ಪೆಕ್ಟರ್ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಸಂಸದ ನಳಿನ್ ಕುಮಾರ್ ಅವರ ವರ್ತನೆ ನಾಚಿಕೆಗೇಡಿನದ್ದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಪೊಲೀಸರ ವಿರುದ್ಧ ಹರಿಹಾಯ್ದ ಪ್ರಕರಣದ ಕೂಲಂಕಷ ತನಿಖೆ ನಡೆಸಬೇಕು. ಈ ರೀತಿ ವರ್ತನೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಂಗಳೂರು ಚಲೋ ಪ್ಲಾಪ್ ಶೋ
ಮಂಗಳೂರು ಚಲೋ ಬಿಜೆಪಿಯವರ ಪ್ಲಾಪ್ ಶೋ ಎಂದು ವ್ಯಂಗ್ಯವಾಡಿದ ಐವನ್ ಡಿಸೋಜ, ಪ್ರತಿಭಟನೆಗೆ ಮೊದಲು ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಹೇಳಲಾಗುತ್ತಿತ್ತು. ಆದರೆ 5,000 ಜನರನ್ನೂ ಕುಳ್ಳಿರಿಸಲು ಅವರಿಗೆ ಸಾಧ್ಯವಾಗಿಲ್ಲ. ಇದಲ್ಲದೆ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುವುದಕ್ಕೂ ತಕರಾರಿತ್ತು ಎಂಬ ಮಾಹಿತಿಯಿದೆ ಎಂದರು.

ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂದ ಹೆಚ್ಚು ಶಕ್ತಿಶಾಲಿಯಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2 ಸೀಟುಗಳನ್ನು ಗಳಿಸಿತ್ತು. ಈ ಭಾರೀ ಅದನ್ನು ಉಳಿಸಿಕೊಳ್ಳಲಿ ಎಂದು ಐವನ್ ಡಿಸೋಜ ಸವಾಲೆಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News