ಪೊಲೀಸರು ನ್ಯಾಯಾಧೀಶರಾಗಿ, ಸಾಕ್ಷಿದಾರರಾಗಿ, ವಿಚಾರಣಾಗಾರರಾಗಿ ವರ್ತಿಸಿದ್ದಾರೆ: ಹರ್ಷ ಮಂದರ್

Update: 2017-09-09 13:12 GMT

ಮಂಗಳೂರು, ಸೆ.9: 'ವಾರ್ತಾಭಾರತಿ' ಪತ್ರಿಕೆಯ ಬಂಟ್ವಾಳ ವರದಿಗಾರ ಇಮ್ತಿಯಾಝ್‌ರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೆ ಪತ್ರಕರ್ತನ ಮೇಲೆ ಯಾವುದೇ ಆರೋಪಗಳಿಲ್ಲದೆ ಬಂಧಮುಕ್ತಗೊಳಿಸಬೇಕು ಎಂದು ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಲೇಖಕ ಹರ್ಷ ಮಂದರ್ ಅಭಿಪ್ರಾಯಿಸಿದ್ದಾರೆ.

‘ಕಾರ್‌ವಾನ್- ಎ- ಮೊಹಬ್ಬತ್’ ಎಂಬ ಅಭಿಯಾನದ ಅಂಗವಾಗಿ ಮಂಗಳೂರಿನ ರೋಶನಿ ನಿಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ‘ವಾರ್ತಾಭಾರತಿ’ಗೆ ಈ ಪ್ರತಿಕ್ರಿಯೆ ನೀಡಿದರು.

'ವಾರ್ತಾಭಾರತಿ' ಪತ್ರಿಕೆಯ ಯುವ ಪತ್ರಕರ್ತ ಇಮ್ತಿಯಾಝ್‌ರವರ ಬಂಧನ ವಿಷಯ ತಿಳಿದು ಬೇಸರವಾಯಿತು. ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತನೇ ಅಲ್ಲಿ ಘಟನೆಯನ್ನು ಸೃಷ್ಟಿಸಿದ್ದ ಎಂದು ಆರೋಪಿಸಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಈ ಮೂಲಕ ನ್ಯಾಯಾಧೀಶರಾಗಿ, ಸಾಕ್ಷಿದಾರರಾಗಿ ಹಾಗೂ ವಿಚಾರಣಾಗಾರರಾಗಿಯೂ, ಎಲ್ಲವೂ ತಾವೇ ಆಗಿ ವರ್ತಿಸಿದ್ದಾರೆ. ಅಂತಹ ಆರೋಪ ಇರುವಾಗ ಪೊಲೀಸರು ತಮ್ಮ ಹಸ್ತಕ್ಷೇಪವಿಲ್ಲದೆ, ಸ್ವತಂತ್ರ ಏಜೆನ್ಸಿ ಮೂಲಕ ತನಿಖೆ ನಡೆಸುವ ಕಾರ್ಯ ಮಾಡಹುದಿತ್ತು. ಅದರಿಂದ ಪತ್ರಕರ್ತ ಹಾಗೂ ಪೊಲೀಸರ ಕಾರ್ಯಾಚರಣೆಯು ವ್ಯಕ್ತವಾಗುತ್ತಿತ್ತು. ಸತ್ಯಾಂಶ ಹೊರಬರುತ್ತಿತ್ತು. ಆದರೆ ಪೊಲೀಸರ ಈ ಕೃತ್ಯ ಉದ್ದೇಶಪೂರ್ವಕವಾಗಿ, ಅದರಲ್ಲೂ ಓರ್ವ ಮುಸ್ಲಿಂ ಪತ್ರಕರ್ತನನ್ನು ಹತ್ತಿಕ್ಕುವ ಪ್ರಯತ್ನವೆಂಬುದು ಕಂಡುಬರುತ್ತಿದೆ.

ದೇಶದ ಹಲವು ಭಾಗಗಳಲ್ಲಿ ಪೊಲೀಸರಿಂದ ಇಂತಹ ಮತೀಯ ಪ್ರವೃತ್ತಿಗಳು ನಡೆದಿವೆ. ಹಾಗಾಗಿ ಈ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು. ತನಿಖೆ ನಡೆಯುವವರೆಗೆ ಆತನನ್ನು ಬಂಧಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News