ಮಲ್ಪೆ : ಬ್ಯಾಂಕ್ ಖಾತೆಯಿಂದ ಹಣ ವಂಚನೆ

Update: 2017-09-09 16:26 GMT

ಮಲ್ಪೆ, ಸೆ.9: ದೂರವಾಣಿ ಕರೆ ಮಾಡಿ ಎಟಿಎಂ ನಂಬರ್ ಪಡೆದು ಬ್ಯಾಂಕ್ ಖಾತೆಯಿಂದ ಹಣ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಟ್ಟಂ ನಿವಾಸಿ ಸಿರಿಲ್ ಸೈಮನ್ ಅಲ್ಮೇಡಾ ಎಂಬವರ ಪತ್ನಿ ದೇಜಿ ಅಲ್ಮೇಡಾ ಎಂಬವರಿಗೆ ಸೆ.8ರಂದು ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ, ಆಧಾರ್ ಕಾರ್ಡ್ ಹಾಗೂ ಎಟಿಎಂ ಜೋಡಿಸಲು ನಂಬರ್ ಕೇಳಿದ್ದು, ಅದಕ್ಕೆ ದೇಜಿ ಎರಡು ಕಾರ್ಡ್‌ಗಳ ನಂಬರ್ ನೀಡಿದ್ದರು. ಅರ್ಧ ಗಂಟೆಯ ನಂತರ ದೇಜಿ ಅಲ್ಮೇಡಾರ ಖಾತೆಯಿಂದ ಎಟಿಎಂ ನಂಬ್ರ ಬಳಸಿ 9,000ರೂ. ಡ್ರಾ ಮಾಡಿ ವಂಚಿಸಿರುವುದು ತಿಳಿದುಬಂತು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News