ಹೊಟೇಲಿನಲ್ಲಿ ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ

Update: 2017-09-09 16:28 GMT

ಅಮಾಸೆಬೈಲು, ಸೆ.9: ಹೊಸಂಗಡಿ ಲಕ್ಷ್ಮಿ ಕೃಪಾ ಹೋಟೆಲ್ನಲ್ಲಿ ಅಕ್ರಮ ವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಸೆ.8ರಂದು ಮಧ್ಯಾಹ್ನ ವೇಳೆ ದಾಳಿ ನಡೆಸಿದ ಉಡುಪಿ ಡಿಸಿಐಬಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತರನ್ನು ಆರ್ಡಿ ಕಣಿಕೊಡ್ಲು ನಿವಾಸಿ ಶಂಭು ಶೆಟ್ಟಿ(46) ಎಂದು ಗುರುತಿಸಲಾಗಿದೆ. ಇವರಿಂದ 6,300ರೂ.ಮೌಲ್ಯ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News