‘ಟ್ಯಾಲೆಂಟ್’ನಿಂದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿ ಕಾರ್ಯಾಗಾರ

Update: 2017-09-10 06:20 GMT

ಮೆಲ್ಕಾರ್, ಸೆ.10: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರದ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮವು ಮೆಲ್ಕಾರ್‌ನ ಬಿರ್ವ ಆಡಿಟೋರಿಯಂನಲ್ಲಿ ಶುಕ್ರವಾರ ನಡೆಯಿತು. ಸಜಿಪ ನಡು ಕೇಂದ್ರ ಜುಮಾ ಮಸೀದಿಯ ಖತೀಬ್ ಅಶ್ಫಾಕ್ ಫೈಝಿ ನಂದಾವರ ಕಾರ್ಯಕ್ರಮ ಉದ್ಘಾಟಿಸಿದರು.

ಫುಟ್‌ಪಾತ್, ಮಾರ್ಕೆಟ್, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಸಂತೆ, ಜಾತ್ರೆ, ಉರೂಸ್, ಮಸೀದಿಯ ಹೊರಗೆ ಹೀಗೆ ಜನ ಸೇರುವ ಪ್ರದೇಶಗಳಲ್ಲಿ ಕಡಿಮೆ ಬಂಡವಾಳದಿಂದ ಮಾಡಬಹುದಾದ ಸಣ್ಣ ವ್ಯಾಪಾರಗಳ ಬಗ್ಗೆ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ಮಾಹಿತಿ ನೀಡಿದರು.

ಸಣ್ಣ ವ್ಯಾಪಾರ ಮಾಡಬಹುದಾದ ಸಾಮಗ್ರಿಗಳನ್ನು ಪ್ರದರ್ಶಿಸಿ ಅವುಗಳು ಸಿಗುವ ಸ್ಥಳ ಮತ್ತು ಅವುಗಳಿಂದ ಗಳಿಸಬಹುದಾದ ಅಂದಾಜು ಲಾಭಾಂಶಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಮಾಹಿತಿ ನೀಡಿದರು. 

ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್‌ ಅಧ್ಯಕ್ಷ ಅಬ್ಬಾಸ್ ಹಾಜಿ ಸಜಿಪ, ಫನ್‌ಟೈಮ್ ಹೋಟೆಲ್ ಮಾಲಕ ಅಹ್ಮದ್ ಬಾವಾ, ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಹ್ಮತುಲ್ಲಾ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಜಸೀಂ ಸಜಿಪ ವಂದಿಸಿದರು. ಮಜೀದ್ ತುಂಬೆ, ಅಸ್ಲಂ ಗೂಡಿನಬಳಿ, ಬಡಿಲ ಹುಸೈನ್, ನಕಾಶ್ ಬಾಂಬಿಲ, ಮುಹಮ್ಮದ್ ಶರೀಫ್ ವಾಮದಪದವು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News