×
Ad

ಮ್ಯಾನ್ಮಾರ್‌ನಲ್ಲಿ ಮಸೀದಿ ಮೇಲೆ ದಾಳಿ

Update: 2017-09-11 23:19 IST

ಢಾಕಾ, ಸೆ.11: ಮ್ಯಾನ್ಮಾರ್‌ನ ರಾಖೈನ್‌ನಲ್ಲಿ ಕಳೆದ ಎರಡು ವಾರಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಭೀಕರ ಹಿಂಸಾಚಾರದಿಂದ ತತ್ತರಿಸಿರುವ 3 ಲಕ್ಷಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾಕ್ಕೆ ಪಲಾಯನಗೈಯುತ್ತಿರುವಂತೆಯೇ, ಮ್ಯಾನ್ಮಾರ್‌ನ ವಿವಿಧೆಡೆ ಕೋಮುಗಲಭೆಗಳು ಭುಗಿಲೆದ್ದಿರುವ ಬಗ್ಗೆ ವರದಿಯಾಗಿದೆ.

ಮಧ್ಯ ಮ್ಯಾನ್ಮಾರ್‌ನ ನಗರವಾದ ತಾವುಂಗ್ ದ್ವಿನ್ ಗಿಯಿ ಎಂಬಲ್ಲಿ ದೊಣ್ಣೆ ಹಾಗೂ ಖಡ್ಗಗಳಿಂದ ಸಜ್ಜಿತರಾಗಿರುವ ಸುಮಾರು 70 ಮಂದಿ ದುಷ್ಕರ್ಮಿಗಳು ಮಸೀದಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಗಲಭೆಕೋರರು ‘‘ ಇದು ನಮ್ಮ ದೇಶ, ಇದು ನಮ್ಮ ನೆಲ’’ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರೆಂದು ಮಸೀದಿಯ ಇಮಾಮ್ ಮುಫ್ತಿ ಸುನ್‌ಲೈಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News