ಅಕ್ರಮ ವಲಸಿಗರಿಗೆ ರಕ್ಷಣೆಯಿಲ್ಲ: ಟ್ರಂಪ್ ನಿರ್ಧಾರದ ವಿರುದ್ಧ ಕ್ಯಾಲಿಫೋರ್ನಿಯ ಮೊಕದ್ದಮೆ
Update: 2017-09-12 21:29 IST
ಕ್ಯಾಲಿಫೋರ್ನಿಯ, ಸೆ. 12: ಮಕ್ಕಳಿರುವಾಗ ಅಕ್ರಮವಾಗಿ ಅಮೆರಿಕಕ್ಕೆ ಕರೆತರಲ್ಪಟ್ಟ ಎಳೆಯ ವಲಸಿಗರು ಹಾಗೂ ವೀಸಾ ಅವಧಿ ಮೀರಿ ವಾಸಿಸಿದವರ ಮಕ್ಕಳಿಗೆ ಗಡಿಪಾರಿನಿಂದ ರಕ್ಷಣೆ ನೀಡುವ ಕಾರ್ಯಕ್ರಮವನ್ನು ರದ್ದುಪಡಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿ ಕ್ಯಾಲಿಫೋರ್ನಿಯ ಸೋಮವಾರ ನ್ಯಾಯಾಲಯಕ್ಕೆ ಹೋಗಿದೆ.
ಟ್ರಂಪ್ ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಇತರ 15 ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆ ಈಗಾಗಲೇ ನ್ಯಾಯಾಲಯಕ್ಕೆ ಹೋಗಿವೆ.
ಈ ಮೊಕದ್ದಮೆಯಲ್ಲಿ ತನ್ನೊಂದಿಗೆ ಮೇರಿಲ್ಯಾಂಡ್, ಮೈನ್ ಮತ್ತು ಮಿನಸೋಟ ರಾಜ್ಯಗಳ ಅಟಾರ್ನಿ ಜನರಲ್‌ಗಳೂ ಕೈಜೋಡಿಸಿದ್ದಾರೆ ಎಂದು ಕ್ಯಾಲಿಫೋರ್ನಿಯ ಅಟಾರ್ನಿ ಜನರಲ್ ಝೇವಿಯರ್ ಬೆಸರ ತಿಳಿಸಿದರು.
ಈ ಕಾರ್ಯಕ್ರಮವನ್ನು ಹಿಂದಕ್ಕೆ ಪಡೆಯುವ ಮೂಲಕ ಟ್ರಂಪ್ ಆಡಳಿತ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದರು.