ಟ್ರಂಪ್ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತೀಯನ ನೇಮಕ

Update: 2017-09-13 13:36 GMT

ವಾಶಿಂಗ್ಟನ್, ಸೆ. 13: ತನ್ನ ಪತ್ರಿಕಾ ಸಂವಹನ ತಂಡದಲ್ಲಿ ಬದಲಾವಣೆಗಳನ್ನು ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಅಮೆರಿಕನ್ ರಾಜ್ ಶಾರನ್ನು ತನ್ನ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ.

ಈ ಮೊದಲು ಶಾ ಅಧ್ಯಕ್ಷರ ಉಪ ಸಹಾಯಕನಾಗಿ ಹಾಗೂ ಉಪ ಸಂಪರ್ಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

 ತನ್ನ ನೂತನ ಹುದ್ದೆಯ ಮೂಲಕ ಶಾ ಶ್ವೇತಭವನದ ಪತ್ರಿಕಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಹೊಂದಲಿದ್ದಾರೆ. ಈ ಮೊದಲು, ಈ ಸ್ಥಾನವನ್ನು ಸಾರಾ ಹಕಬೀ ಸ್ಯಾಂಡರ್ಸ್ ಹೊಂದಿದ್ದರು. ಈಗ ಅವರು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಪ್ರಥಮ ವಕ್ತಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News