ಗೃಹ ಖರೀದಿದಾರರನ್ನು ಸಾಮಾನ್ಯ ಹೂಡಿಕೆದಾರರಂತೆ ಪರಿಗಣಿಸಬೇಡಿ: ಸುಪ್ರೀಂ ಕೋರ್ಟ್
ಲಕ್ನೊ, ಸೆ. 13: “ಗೃಹ ಖರೀದಿದಾರರ ಕಣ್ಣೀರಿನ ಬಗ್ಗೆ ನಮಗೆ ಕಾಳಜಿ ಇದೆ. ಗೃಹ ಖರೀದಿದಾರರ ಮೇಲೆ ಬಿಲ್ಡರ್‌ಗಳು ಸವಾರಿ ಮಾಡಬಾರದು. ಅವರು ಕಠಿಣ ದುಡಿಮೆ ಹಣವನ್ನು ವ್ಯಯಿಸುತ್ತಾರೆ. ಗೃಹ ಖರೀದಿದಾರರನ್ನು ಸಾಮಾನ್ಯ ಹೂಡಿಕೆದಾರಂತೆ ಪರಿಗಣಿಸಬೇಡಿ” ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಹೇಳಿದೆ. ಗೃಹ ನೀಡಲು ವಿಳಂಬಿಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ 50 ಲಕ್ಷ ರೂಪಾಯಿ ಮಧ್ಯಾಂತರ ಪರಿಹಾರ ನೀಡುವಂತೆ ಜೆ.ಪಿ. ಗುಂಪಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್4 ಲಕ್ಷ ರೂಪಾಯಿಯನ್ನು ಅಲ್ಪಾವಧಿ ಸ್ಥಿರ ಠೇವಣಿಯನ್ನು ಬ್ಯಾಂಕ್‌ನಲ್ಲಿ ಇರಿಸುವಂತೆ ಹಾಗೂ ನೊಯ್ಡಾ-ಗ್ರೇಟರ್ ಎಕ್ಸ್‌ಪ್ರೆಸ್‌ವೇಯಲ್ಲಿರುವ ತನ್ನ ಕಲಿಪ್ಸೊ ಯೋಜನೆಯಲ್ಲಿ ಗೃಹ ಖರೀದಿದಾರರಿಗೆ ಫ್ಲಾಟ್‌ಗಳನ್ನು ನೀಡುವಂತೆ ಜಯಪ್ರಕಾಶ್ ಅಸೋಸಿಯೇಟ್ ಲಿಮಿಟೆಡ್‌ಗೆ ಆದೇಶಿಸಿತ್ತು.
ಖರೀದಿದಾರರಿಗೆ ಗೃಹ ನೀಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿ ವರ್ಷಕ್ಕೆ ಶೇ. 12 ದಂಡ ವಿಧಿಸಿ ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ಆಯೋಗ 2016 ಮೇ 2ರಂದು ನೀಡಿದ ಆದೇಶವನ್ನು ಈ ರಿಯಲ್ ಎಸ್ಟೇಟ್ ಸಂಸ್ಥೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.