ಸಿರಿಯಾ ನಿರಾಶ್ರಿತರನ್ನು ಭೇಟಿಯಾದ ಪ್ರಿಯಾಂಕಾ ಚೋಪ್ರಾ

Update: 2017-09-14 13:47 GMT

ಜೋರ್ಡಾನ್, ಸೆ.14: ಯುನಿಸೆಫ್ ಸೌಹಾರ್ದ ರಾಯಭಾರಿ ಪ್ರಿಯಾಂಕಾ ಚೋಪ್ರಾ ತನ್ನ 2 ದಿನಗಳ ಜೋರ್ಡಾನ್ ಪ್ರವಾಸದ ಸಂದರ್ಭ ಅಲ್ಲಿರುವ ಸಿರಿಯಾ ನಿರಾಶ್ರಿತರನ್ನು ಭೇಟಿಯಾದರು.

ಮೊದಲ ದಿನ ಅಮ್ಮಾನ್ ನಲ್ಲಿರುವ ಯನಿಸೆಫ್ ನ ಮಕಾನಿ ಸೆಂಟರ್ ಗೆ ಅವರು ಭೇಟಿ ನೀಡಿದರು. ಎರಡನೆ ದಿನ ಝ’ತಾರಿ ನಿರಾಶ್ರಿತ ಶಿಬಿರಕ್ಕೆ ಭೇಟಿ ನೀಡಿದ ಪ್ರಿಯಾಂಕಾ, ಯುನಿಸೆಫ್ ನಡೆಸುತ್ತಿರುವ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಕಾಲ ಕಳೆದರು. ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಲಕರು ಹಾಗು ಬಾಲ್ಯ ವಿವಾಹದಿಂದ ಪಾರಾದ ಬಾಲಕಿಯರಿಗಾಗಿ ಇರುವ ಎರಡು ಮಕಾನಿ ಕೇಂದ್ರಗಳಿಗೂ ಭೇಟಿ ನೀಡಿದರು.

80 ಸಾವಿರ ಜನಸಂಖ್ಯೆಯಿರುವ ಝ’ತಾರಿ ವಿಶ್ವದ ಅತೀ ದೊಡ್ಡ ಸಿರಿಯನ್ ನಿರಾಶ್ರಿತರ ಕ್ಯಾಂಪ್ ಆಗಿದೆ.

“ತಮ್ಮ ಮನೆಗಳಿಗೆ ಹಿಂದಿರುಗುವ ಯಾವುದೇ ಭರವಸೆಯಿಲ್ಲದ ಕುಟುಂಬಕ್ಕೆ ನೀವು ಏನನ್ನು ಹೇಳುತ್ತೀರಿ?, ಒಂದು ವೇಳೆ ಅವರು ಹೋದರೂ ಈಗಾಗಲೇ ನಡೆದಿರುವ ಸಿರಿಯಾ ಯುದ್ಧದಂತೆ ಮತ್ತೊಂದು ಯುದ್ಧ ನಡೆದರೆ ಅವರು ಮತ್ತೆ ಸರಿಹೊಂದಲು ದಶಕಗಳೇ ಬೇಕಾಗಬಹುದು. ನಾನು ಮಾನವೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಿದ್ದೇನೆ. ಈ ಬಿಕ್ಕಟ್ಟು ಮಕ್ಕಳ ಒಂದಿಡೀ ಪೀಳಿಗೆಯನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬಹುದು. ಅವರಿಗೆ ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಒಂದಿಡೀ ಮಕ್ಕಳ ಜನಾಂಗವು ಪ್ರಪಂಚವನ್ನು ದ್ವೇಷಿಸಹುದು” ಎಂದು ಪ್ರಿಯಾಂಕಾ ಈ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News