‘ಇರ್ಮಾ’ ಚಂಡಮಾರುತ: ಮೃತರ ಸಂಖ್ಯೆ 20ಕ್ಕೆ ಏರಿಕೆ

Update: 2017-09-14 15:04 GMT

ಮಯಾಮಿ (ಅಮೆರಿಕ), ಸೆ. 14: ಫ್ಲೋರಿಡದ ನರ್ಸಿಂಗ್ ಹೋಮ್ ಒಂದರ ಎಂಟು ನಿವಾಸಿಗಳು ಮೃತಪಟ್ಟಿದ್ದಾರೆ. ‘ಇರ್ಮಾ’ ಚಂಡಮಾರುತ ಅಪ್ಪಳಿಸಿದಂದಿನಿಂದ ಈ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ವಿದ್ಯುತ್ ಪೂರೈಕೆಯ ಅಭಾವವೇ ಅವರ ಸಾವಿಗೆ ಕಾರಣ ಎಂದು ಭಾವಿಸಲಾಗಿದೆ.

ಇದರೊಂದಿಗೆ ಫ್ಲೋರಿಡದಲ್ಲಿ ಚಂಡಮಾರುತಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಬಲಿಯಾದವರ ಸಂಖ್ಯೆ 20ಕ್ಕೇರಿದೆ.

ಫ್ಲೋರಿಡದ ಲಕ್ಷಾಂತರ ಮನೆಗಳಿಗೆ ಇನ್ನು ವಿದ್ಯುತ್ ಮರು ಪೂರೈಕೆಯಾಗಿಲ್ಲ. ತಕ್ಷಣ ವಿದ್ಯುತ್ ಮರು ಪೂರೈಕೆ ಆಗಬೇಕಾದ ಅಗತ್ಯವನ್ನು ಈ ಘಟನೆ ಮನವರಿಕೆ ಮಾಡಿದೆ.

ಈ ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವುದಾಗಿ ಗವರ್ನರ್ ರಿಕ್ ಸ್ಕಾಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News