×
Ad

ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಗೂಗಲ್

Update: 2017-09-14 22:05 IST

ಹೊಸದಿಲ್ಲಿ, ಸೆ. 14: ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಗೂಗಲ್ ಕೂಡ ಕಾಲಿರಿಸಲಿದ್ದು, ಸೆಪ್ಟಂಬರ್ 18ರಂದು ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಪೇಮೆಂಟ್ ತೇಜ್ ಅನ್ನು ಆರಂಭಿಸಲಿದೆ.

ಭಾರತದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಹಾಗೂ ಸೂಪರ್-ಸ್ಪರ್ಧಾತ್ಮಕ ಡಿಜಿಟಲ್ ಪೇಮೆಂಟ್ ಕ್ಷೇತ್ರಕ್ಕೆ ಗೂಗಲ್‌ನ ಅಂಗಸಂಸ್ಥೆಯಾದ ಅಲ್ಫಾಬೆಟ್ ಪ್ರವೇಶಿಸಲಿದೆ ಎಂದು ದಿ. ಕೆನ್.ಕಾಮ್ ಹೇಳಿದೆ.

 ಪ್ರತಿಯೊಬ್ಬರ ಆವಶ್ಯಕತೆಗಳಿಗೆ ಅನುಗುಣವಾಗಿ ಉತ್ಪಾದನೆಯ ನಿರಂತರ ಪೂರೈಕೆಯ ಖಾತರಿ ನೀಡಲು ಸೆಪ್ಟಂಬರ್ 18ರಂದು ನಾವು ಬೃಹತ್ ಹೆಜ್ಜೆಯೊಂದನ್ನು ಇರಿಸಲಿದ್ದೇವೆ ಎಂದು ಅದು ಹೇಳಿದೆ.

ಗೂಗಲ್‌ನ ನೆಕ್ಸ್ಟ್ ಬಿಲಿಯನ್ ಯೂಸರ್ಸ್‌ನ ಉಪಾಧ್ಯಕ್ಷ ಸೀಸರ್ ಸೇನ್‌ಗುಪ್ತಾ ಭಾಷಣ ಮಾಡಲಿರುವ ಕಾರ್ಯಕ್ರಮದಲ್ಲಿ ಈ ಮೇಕ್ ಇನ್ ಇಂಡಿಯಾ ಉತ್ಪಾದನೆ ಬಿಡುಗಡೆಗೊಳ್ಳಲಿದೆ ಎಂದು ದಿ ಕೆನ್.ಕಾಮ್ ಹೇಳಿದೆ.

 ತೇಜ್ (ಕನ್ನಡದಲ್ಲಿ ವೇಗ) ಆ್ಯಂಡ್ರಾಯ್ಡ್ ಪೇಯಂತೆ ಕಾರ್ಯನಿರ್ವಹಿಸಲಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ಆರಂಭಿಸಿದೆ. ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸುತ್ತದೆ. ಮೊಬೈಲ್ ಮೂಲಕ ಎರಡು ಬ್ಯಾಂಕ್ ಖಾತೆ ನಡುವೆ ಹಣ ವರ್ಗಾವಣೆಗೆ ಇದು ಅನುಕೂಲಕರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News