×
Ad

ವಿದ್ಯಾರ್ಥಿಗಳ ಸುರಕ್ಷೆ ಶಾಲೆಗಳ ಜವಾಬ್ದಾರಿ: ಸಿಬಿಎಸ್ಇ

Update: 2017-09-14 22:44 IST

ಹೊಸದಿಲ್ಲಿ, ಸೆ. 13: ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷೆ ಜವಾಬ್ದಾರಿಯನ್ನು ಶಾಲೆಯ ಮೇಲೆ ಹೊರಿಸಿರುವ ಸಿಬಿಎಸ್‌ಇ, ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಭದ್ರತೆಗೆ ಸಂಬಂಧಿಸಿದ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಮಾರ್ಗ ಸೂಚಿಗಳನ್ನು ಅನುಸರಿಸದೇ ಇರುವ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಸಿಬಿಎಸ್‌ಇ ಹೇಳಿದೆ.

  ದಿಲ್ಲಿಯಲ್ಲಿ ಶಾಲೆಯ ಜವಾನ 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹಾಗೂ ಗುರ್ಗಾಂವ್‌ನ ಶಾಲೆಯಲ್ಲಿ 7 ವರ್ಷದ ಬಾಲಕನನ್ನು ಹತ್ಯೆಗೈದಿರುವ ಘಟನೆಯಿಂದ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷೆ ಬಗ್ಗೆ ಕಳವಳ ಹೆಚ್ಚಾಗಿರುವ ನಡುವೆ ಸಿಬಿಎಸ್‌ಇಯ ಈ ಮಾರ್ಗಸೂಚಿ ಹೊರಬಿದ್ದಿದೆ.

ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸುರಕ್ಷೆ ಒದಗಿಸಲು ಸುರಕ್ಷಾ ಪರಿಶೀಲನೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಪರಿಶೀಲನೆ, ಮನೋರೋಗದ ವೌಲ್ಯ ಮಾಪನ, ಹೆತ್ತವರು-ವಿದ್ಯಾರ್ಥಿಗಳ ಸಮಿತಿ ರೂಪಿಸುವುದು ಹಾಗೂ ಹೆತ್ತವರಿಂದ ಫೀಡ್‌ಬ್ಯಾಕ್ ಪಡೆಯುವುದು ಮೊದಲಾದ ಕ್ರಮಗಳನ್ನು ಕೂಡ ಸಿಬಿಎಸ್‌ಇ ಮಾರ್ಗಸೂಚಿ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News