ಅಕ್ರಮ ಮಾದಕ ದ್ರವ್ಯ ಉತ್ಪಾದಕರ ಟ್ರಂಪ್ ಪಟ್ಟಿಯಲ್ಲಿ ಭಾರತ

Update: 2017-09-14 17:37 GMT

ವಾಶಿಂಗ್ಟನ್, ಸೆ. 14: ಅಕ್ರಮ ಮಾದಕ ವಸ್ತು ಉತ್ಪಾದನೆ ಮತ್ತು ಸಾಗಾಟ ನಡೆಯುವ ತೊಡಗಿರುವ ಪ್ರಮುಖ 22 ದೇಶಗಳ ಪೈಕಿ ಭಾರತವೂ ಒಂದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ: ಅಫ್ಘಾನಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್, ಬಹಾಮಾಸ್, ಬೆಲೈಝ್, ಬೊಲಿವಿಯ, ಕೊಲಂಬಿಯ, ಕೋಸ್ಟರಿಕ, ಡಾಮಿನಿಕನ್ ರಿಪಬ್ಲಿಕ್, ಇಕ್ವೆಡಾರ್, ಎಲ್ ಸಾಲ್ವಡಾರ್, ಗ್ವಾಟೆಮಾಲ, ಹೈಟಿ, ಹಾಂಡುರಸ್, ಜಮೈಕ, ಲಾವೋಸ್, ಮೆಕ್ಸಿಕೊ, ನಿಕಾರಗುವ, ಪನಾಮ, ಪೆರು ಮತ್ತು ವೆನೆಝುವೆಲ.

ಸರಕಾರವೊಂದು ಕಾನೂನುಗಳ ಮೂಲಕ ಮಾದಕ ದ್ರವ್ಯದ ವಿರುದ್ಧ ಸಮರ ಸಾರಿದರೂ, ಈ ದಂಧೆ ನಡೆಯಲು ಭೌಗೋಳಿಕ, ವಾಣಿಜ್ಯಿಕ ಮತ್ತು ಆರ್ಥಿಕ ಅಂಶಗಳು ಹೇಗೆ ಕಾರಣವಾಗುತ್ತವೆ ಎನ್ನುವುದು ಈ ಪಟ್ಟಿ ತಯಾರಿಸಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News