×
Ad

ಪರಶುರಾಮ ದೇವರು ನಿಷ್ಣಾತ ಇಂಜಿನಿಯರ್ : ಪಾರಿಕ್ಕರ್ ವ್ಯಾಖ್ಯಾನ

Update: 2017-09-15 19:48 IST

 ಪಣಜಿ, ಸೆ.15: ಸಮುದ್ರವನ್ನು ಹಿಮ್ಮೆಟ್ಟಿಸಿ ಭೂಭಾಗವನ್ನು ವಶಕ್ಕೆ ಪಡೆದು ಗೋವಾವನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿರುವ ಪರಶುರಾಮ ದೇವರು ಓರ್ವ ನಿಷ್ಣಾತ ಇಂಜಿನಿಯರ್ ಆಗಿದ್ದಿರಬಹುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವ್ಯಾಖ್ಯಾನಿಸಿದ್ದಾರೆ.

  ನಗರದಲ್ಲಿ ಹಮ್ಮಿಕೊಳ್ಳಲಾದ ‘ಇಂಜಿನಿಯರ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರಾಣಶಾಸ್ತ್ರದ ಪ್ರಕಾರ , ಪರಶುರಾಮ ದೇವರು ಗೋವಾವನ್ನು ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರಶುರಾಮ ಇಂಜಿನಿಯರ್‌ಗಳ ವಂಶಕ್ಕೆ ಸೇರಿದವರು ಎಂಬುದು ನನ್ನ ನಂಬಿಕೆ ಎಂದ ಪಾರಿಕ್ಕರ್, ಇಂಜಿನಿಯರಿಂಗ್ ಎಂಬುದು ಭಾರತದಲ್ಲಿದ್ದ ಪುರಾತನವಾದ ಕಲೆಯಾಗಿದ್ದು ಇದಕ್ಕೆ ಆಧುನಿಕ ಯುಗದಲ್ಲೂ ಮಾನ್ಯತೆಯಿದೆ. ಸುಮಾರು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಹಸ್ತಿನಾಪುರ ಅಥವಾ ಪಾಂಡವ ಅರಮನೆ ಇತ್ಯಾದಿಗಳಿದ್ದವು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಈ ನಗರಗಳು ತಂತ್ರಜ್ಞಾನದ ಸಮರ್ಪಕ ಬಳಕೆಗೆ ಉದಾಹರಣೆಯಾಗಿವೆ ಎಂದು ಹೇಳಿದರು. ಭಾರತವು ಇಂಜಿನಿಯರಿಂಗ್ ಕೌಶಲ್ಯದ ಮಹತ್ವವನ್ನು ಮಾನ್ಯ ಮಾಡಿದ ದಿನವನ್ನು ಇಂಜಿನಿಯರಿಂಗ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಪಾರಿಕ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News