×
Ad

ಮ್ಯಾನ್ಮಾರ್‌ನ 40 ಶೇ. ರೋಹಿಂಗ್ಯರು ಬಾಂಗ್ಲಾದಲ್ಲಿ: ವಿಶ್ವಸಂಸ್ಥೆ

Update: 2017-09-15 22:02 IST

ವಿಶ್ವಸಂಸ್ಥೆ, ಸೆ. 15: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ವಾಸಿಸುತ್ತಿರುವ ಒಟ್ಟು ರೋಹಿಂಗ್ಯಾ ಜನಸಂಖ್ಯೆಯ ಸುಮಾರು 40 ಶೇಕಡ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಆಗಸ್ಟ್ 25ರ ಬಳಿಕ ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಗಡಿ ದಾಟಿ ಬಂದ ರೋಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ಸಂಖ್ಯೆ 3.89 ಲಕ್ಷ ತಲುಪಿದೆ ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜರಿಕ್ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಬುಧವಾರ ತಿಳಿಸಿದರು.

‘‘ಕಳೆದ 24 ಗಂಟೆಗಳ ಅವಧಿಯಲ್ಲೇ 10,000 ಮಂದಿ ಬಾಂಗ್ಲಾದೇಶಕ್ಕೆ ಗಡಿ ದಾಟಿ ಬಂದಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆ ಪಲಾಯನಗೈದ ರೋಹಿಂಗ್ಯ ಮುಸ್ಲಿಮರನ್ನು ಗಣನೆಗೆ ತೆಗೆದುಕೊಂಡರೆ, ಈವರೆಗೆ ರಖೈನ್ ರಾಜ್ಯದ ರೋಹಿಂಗ್ಯ ಜನಸಂಖ್ಯೆಯ ಸುಮಾರು 40 ಶೇಕಡ ಮಂದಿ ಬಾಂಗ್ಲಾದೇಶಕ್ಕೆ ಪಲಾಯನಗೈದಂತಾಗಿದೆ’’ ಎಂದರು.

ಬಾಂಗ್ಲಾದೇಶದ ಕಾಕ್ಸ್ ಬಝಾರ್‌ಗೆ ಬರುತ್ತಿರುವ ಸಾವಿರಾರು ರೋಹಿಂಗ್ಯ ಮಕ್ಕಳಿಗಾಗಿ ನೀರು ಮತ್ತು ನೈರ್ಮಲ್ಯ ಪರಿಕರಗಳನ್ನು ಯುನಿಸೆಫ್ ಒದಗಿಸುತ್ತಿದೆ ಹಾಗೂ ಬರಲಿರುವ ದಿನಗಳು ಮತ್ತು ವಾರಗಳಿಗಾಗಿ ನಿರಂತರ ಪೂರೈಕೆಯನ್ನು ಅದು ಖಾತರಿಪಡಿಸುತ್ತಿದೆ ಎಂದರು.

ಬಾಂಗ್ಲಾದೇಶಕ್ಕೆ ಬರುತ್ತಿರುವ ರೋಹಿಂಗ್ಯ ನಿರಾಶ್ರಿತರ ಪೈಕಿ 60 ಶೇಕಡದಷ್ಟು ಮಕ್ಕಳು ಎಂದು ಅಂದಾಜಿಸಲಾಗಿದೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯ ವಕ್ತಾರರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News