ರೋಹಿಂಗ್ಯ ಗ್ರಾಮಗಳಿಗೆ ಸೇನೆಯಿಂದ ಬೆಂಕಿ: ದಾಖಲೆ ಸಮೇತ ಆ್ಯಮ್ನೆಸ್ಟಿ ಆರೋಪ

Update: 2017-09-15 16:45 GMT

ಢಾಕಾ (ಬಾಂಗ್ಲಾದೇಶ), ಸೆ. 15: ಮ್ಯಾನ್ಮಾರ್‌ನಲ್ಲಿ ಸೇನೆಯು ರೋಹಿಂಗ್ಯ ಗ್ರಾಮಗಳಿಗೆ ವ್ಯವಸ್ಥಿತವಾಗಿ ಬೆಂಕಿಯಿಡುತ್ತಿರುವುದಕ್ಕೆ ತನ್ನ ಬಳಿ ಪುರಾವೆಯಿದೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಶುಕ್ರವಾರ ಹೇಳಿದೆ

ರಖೈನ್ ರಾಜ್ಯದಲ್ಲಿ ಸುಟ್ಟ ಗ್ರಾಮಗಳನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಶುಕ್ರವಾರ ಬಿಡುಗಡೆ ಮಾಡಿದೆ.

  ಕಳೆದ ಮೂರು ವಾರಗಳಲ್ಲಿ ಮ್ಯಾನ್ಮಾರ್‌ನ ಭದ್ರತಾ ಪಡೆಗಳು ರೋಹಿಂಗ್ಯಾ ಮುಸ್ಲಿಮರ ಮನೆಗಳನ್ನು ವ್ಯವಸ್ಥಿತವಾಗಿ ನಿರ್ಮೂಲಗೊಳಿಸುತ್ತಿವೆ ಎಂದು ಅದು ಆರೋಪಿಸಿದೆ.

ಉತ್ತರ ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಿಂದ 80 ಭಾರೀ ಪ್ರಮಾಣದ ಬೆಂಕಿಗಳನ್ನು ಉಪಗ್ರಹಗಳು ಗುರುತಿಸಿವೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸಂಶೋಧಕ ಒಲೋಫ್ ಬ್ಲಾಂಕ್ವಿಸ್ಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News