ಭ್ರಷ್ಟಾಚಾರಮುಕ್ತ ರಾಷ್ಟ್ರಕ್ಕೆ ವಿದ್ಯಾರ್ಥಿ ಸಮೂಹ ಪಣ ತೊಡಲಿ: ನ್ಯಾ.ಸಂತೋಷ್ ಹೆಗ್ಡೆ

Update: 2017-09-16 10:30 GMT

ವಿಟ್ಲ, ಸೆ.16: ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಅದನ್ನು ಯುವ ಸಮೂಹ ನಿರ್ಮೂಲನೆ ಮಾಡುವ ಅನಿವಾರ್ಯತೆ ಇದೆ. ಈಗಲೇ ಇದರ ವಿರುದ್ಧ ಜಾಗೃತಿ ಮೂಡಿಸಿದರೆ ಒಂದೆರಡು ದಶಕದಲ್ಲಿ ಭ್ರಷ್ಟಾಚಾರ ರಹಿತ ಪ್ರಜಾಪ್ರಭುತ್ವ ರಾಷ್ಟ್ರವಾಗುವ ಸಾಧ್ಯತೆ ಇದೆ. ಇದಕ್ಕೆ ವಿದ್ಯಾರ್ಥಿ ಸಮೂಹ ಪಣ ತೊಡಬೇಕೆಂದು ಕರ್ನಾಟಕದ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.

ಕಲ್ಲಡ್ಕ ಸಮೀಪದ ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ನಡೆದ "ಭ್ರಷ್ಟಾಚಾರ ಮತ್ತು ಸಮಾಜ" ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

 ಮಾನವನಿಗೆ ತೃಪ್ತಿ ಮತ್ತು ಮಾನವೀಯತೆ ಇರಬೇಕು. ದುರಾಸೆ, ಅತೃಪ್ತಿ ತಲೆದೋರಿದಾಗ ಆತ ಭ್ರಷ್ಟನಾಗುತ್ತಾನೆ. ಇದ್ದುದರಲ್ಲೇ ಸಂತೃಪ್ತಿಯಾದಾಗ ಸುಂದರ ಜೀವನ ನಡೆಸಬಹುದು ಎಂದು ಅವರು 

ಜೆಮ್ ಪಬ್ಲಿಕ್ ಸ್ಕೂಲ್ ನ ಆಡಳಿತ ವ್ಯವಸ್ಥಾಪಕ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ಎ.ಪಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ರೈ, ಎಂ.ಫ್ರೆಂಡ್ಸ್ ಮಂಗಳೂರು ಇದರ ಕಾರ್ಯದರ್ಶಿ ರಶೀದ್ ವಿಟ್ಲ, ಜೆಮ್ ಪಬ್ಲಿಕ್ ಸ್ಕೂಲ್ ಟ್ರಸ್ಟಿಗಳಾದ ಹಾಜಿ ಜಿ. ಅಹ್ಮದ್ ಯೂಸುಫ್, ಹಾಜಿ ಜಿ.ಅಬ್ದುಲ್ ರಝಾಕ್, ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ಝಕರಿಯಾ ಕಲ್ಲಡ್ಕ, ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಪ್ರಾಂಶುಪಾಲ ನಿರಂಜನ್ ಡಿ. ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ತಾಹಿರಾ ಡಿ.ಬಿ. ಸ್ವಾಗತಿಸಿದರು. ಇದೇ ಸಂದರ್ಭ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News