ರೊಹಿಂಗ್ಯಾ ನಿರಾಶ್ರಿತರಿಗಾಗಿ ಬ್ರಿಟನ್‌ನಿಂದ 218 ಕೋಟಿ ರೂ. ನೆರವು

Update: 2017-09-16 16:30 GMT

ಲಂಡನ್, ಸೆ. 16: ‘ಬಾಂಗ್ಲಾದೇಶ ಮತ್ತು ಬರ್ಮ (ಮ್ಯಾನ್ಮಾರ್)ಗಳಲ್ಲಿ ನೆಲೆಸಿರುವ ಅಭೂತಪೂರ್ವ ಪ್ರಮಾಣದ ಬಿಕ್ಕಟ್ಟನ್ನು’ ನಿಭಾಯಿಸಲು ಬ್ರಿಟನ್ ಶುಕ್ರವಾರ ಹೆಚ್ಚುವರಿ 25 ಮಿಲಿಯ ಪೌಂಡ್ (ಸುಮಾರು 218 ಕೋಟಿ ರೂಪಾಯಿ) ನೆರವನ್ನು ಬಿಡುಗಡೆ ಮಾಡಿದೆ.

ಈ ನಿಧಿಯ ಹೆಚ್ಚಿನ ಭಾಗವನ್ನು ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ನಿರಾಶ್ರಿತರಿಗಾಗಿ ಖರ್ಚು ಮಾಡಲಾಗುವುದು ಎಂದು ಬ್ರಿಟನ್‌ನ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದರು.

ಮ್ಯಾನ್ಮಾರ್‌ನಲ್ಲಿನ ತಮ್ಮ ಮನೆಗಳನ್ನು ತೊರೆದು ಬಂದಿರುವ ಲಕ್ಷಾಂತರ ನಿರಾಶ್ರಿತರಿಗೆ ನೀಡಲಾಗುತ್ತಿರುವ ತುರ್ತು ಜೀವರಕ್ಷಕ ನೆರವನ್ನು ಹೆಚ್ಚಿಸಲು ನಿಧಿಯನ್ನು ಬಳಸಲಾಗುವುದು ಎಂದು ಪ್ರೀತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News