×
Ad

ಜಪಾನ್ ಓಪನ್ ಟೂರ್ನಿ: ಝರೀನಾ ದಿಯಾಸ್‌ಗೆ ಪ್ರಶಸ್ತಿ

Update: 2017-09-17 22:30 IST

ಟೋಕ್ಯೊ, ಸೆ.17: ಅರ್ಹತಾ ಸುತ್ತಿನಿಂದ ಗೆದ್ದು ಬಂದಿದ್ದ ಕಝಾಕ್‌ಸ್ತಾನದ ಝರೀನಾ ದಿಯಾಸ್ ಡಬ್ಲೂಟಿಎ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಚೊಚ್ಚಲ ಡಬ್ಲೂಟಿಎ ಪ್ರಶಸ್ತಿ ಗೆದ್ದಿದ್ದಾರೆ.

ಫೈನಲ್ ಪಂದ್ಯದಲ್ಲಿ ಅವರು ಆತಿಥೇಯ ದೇಶದ ಮಿಯು ಕಟೊ ಅವರನ್ನು 6-2, 7-5 ನೇರ ಸೆಟ್‌ಗಳಿಂದ ಮಣಿಸಿದರು. ವಿಶ್ವದ 100ನೇ ಶ್ರೇಯಾಂಕಿತೆ ಆಟಗಾರ್ತಿಯಾಗಿರುವ ದಿಯಾಸ್, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕ್ರಿಸ್ತಿನಾ ಮೆಕ್‌ಹ್ಯಾಲ್‌ರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News