ಮೊದಲ ಏಕದಿನ: ಭಾರತಕ್ಕೆ 26 ರನ್‌ಗಳ ಜಯ
Update: 2017-09-17 22:56 IST
ಚೆನ್ನೈ, ಸೆ.17: ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 26 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಇಲ್ಲಿನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಡಕ್‌ವರ್ಥ್ ಲೂವಿಸ್ ನಿಯಮದಂತೆ ಗೆಲುವಿಗೆ 21 ಓವರ್‌ಗಳಲ್ಲಿ 164 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ 9 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತು.
ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಗೆಲುವು ದಾಖಲಿಸಿತು.
ಭಾರತದ ಬೌಲರ್‌ಗಳಾದ ಯುಜುವೇಂದ್ರ ಚಾಹಲ್(30ಕ್ಕೆ 3), ಕುಲ್‌ದೀಪ್ ಯಾದವ್(33ಕ್ಕೆ 2), ಹಾರ್ದಿಕ್ ಪಾಂಡ್ಯ(28ಕ್ಕೆ 2), ಜಸ್‌ಪ್ರೀತ್ ಬುಮ್ರಾ(20ಕ್ಕೆ1) ಮತ್ತು ಭುವನೇಶ್ವರ ಕುಮಾರ್(25ಕ್ಕೆ1) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ಗೆಲುವಿನ ದಡ ಸೇರುವಲ್ಲಿ ಎಡವಿತು.
ಆಸ್ಟ್ರೇಲಿಯದ ಆರಂಭಿಕ ದಾಂಡಿಗರಾದ (25), ಗ್ಲೆನ್ ಮ್ಯಾಕ್ಸ್‌ವೆಲ್(39) ಮತ್ತು ಜೇಮ್ಸ್ ಫಾಕ್ನೆರ್(ಔಟಾಗದೆ 32) ಎರಡಂಕೆಯ ಸ್ಕೋರ್ ದಾಖಲಿಸಿದರು.