×
Ad

ಜಗತ್ತಿನ ಅತಿ ಹಿರಿಯ ವ್ಯಕ್ತಿ ನಿಧನ

Update: 2017-09-18 19:54 IST

ಕಿಂಗ್‌ಸ್ಟನ್ (ಜಮೈಕ), ಸೆ. 18: ಜಗತ್ತಿನ ಅತಿ ಹಿರಿಯ ವ್ಯಕ್ತಿ ಜಮೈಕದ ವಾಯಲೆಟ್ ಬ್ರೌನ್ ನಿಧನರಾಗಿದ್ದಾರೆ. ಅವರಿಗೆ 117 ವರ್ಷ ಮತ್ತು 189 ದಿನಗಳಾಗಿದ್ದವು.

‘ಆಂಟಿ ವಿ’ ಎಂದೇ ಕರೆಯಲ್ಪಡುತ್ತಿದ್ದ ವಾಯಲೆಟ್ ಶುಕ್ರವಾರ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅಲ್ಲಿ ಅವರು ಹೃದಯದ ಕಾಯಿಲೆ ಮತ್ತು ನಿರ್ಜಲೀಕರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು.

 ಅವರು ಇತ್ತೀಚಿನವರೆಗೂ ತನ್ನ ಚರ್ಚ್‌ನಲ್ಲಿ ಸಕ್ರಿಯವಾಗಿದ್ದರು. ತನ್ನ ಕಠಿಣ ಪರಿಶ್ರಮ ಮತ್ತು ಕ್ರೈಸ್ತ ಧರ್ಮದ ಮೇಲಿನ ನಂಬಿಕೆಯೇ ತನ್ನ ದೀರ್ಘಾಯುಷ್ಯಕ್ಕೆ ಕಾರಣ ಎಂಬುದಾಗಿ ಅವರು ಭಾವಿಸಿದ್ದರು.

ಅವರಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದರು. ಈ ಪೈಕಿ ಅವರ ಹಿರಿಯ ಮಗ ಎಪ್ರಿಲ್‌ನಲ್ಲಿ 97ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಇನ್ನು ಜಪಾನ್‌ನ ನಬಿ ತಜಿಮ ಅತಿ ಹಿರಿಯ ವ್ಯಕ್ತಿ

ವಾಯಲೆಟ್ ಬ್ರೌನ್ ನಿಧನದ ಬಳಿಕ ಜಪಾನ್‌ನ ನಬಿ ತಜಿಮ ಜಗತ್ತಿನ ದಾಖಲಿತ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಅವರಿಗೆ ಸೋಮವಾರದಂದು 117 ವರ್ಷ ಮತ್ತು 34 ದಿನಗಳು ತುಂಬಿವೆ.

ಅವರು ಜಪಾನ್‌ನ ಕಗೊಶಿಮ ರಾಜ್ಯದ ಕಿಕೈ ಪಟ್ಟಣದಲ್ಲಿ 1900 ಆಗಸ್ಟ್ 4ರಂದು ಜನಿಸಿದರು.

ಅವರಿಗೆ ಏಳು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ ಹಾಗೂ 28 ಮೊಮ್ಮಕ್ಕಳು, 56 ಮರಿಮಕ್ಕಳು ಮತ್ತು 35 ಮರಿಮಕ್ಕಳ ಮಕ್ಕಳನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News