36 ವರ್ಷಗಳಿಂದ ಪ್ರೇಮಿಸಿ ರೈಲು ನಿಲ್ದಾಣವನ್ನು ಮದುವೆಯಾದ ಮಹಿಳೆ !

Update: 2017-09-18 14:42 GMT

ಕ್ಯಾಲಿಫೋರ್ನಿಯ (ಅಮೆರಿಕ), ಸೆ. 18: ಪ್ರೇಮಿಗಳಿಗಾಗಿ ವರ್ಷಗಟ್ಟಲೆ ಅಥವಾ ಬದುಕಿಡೀ ಕಾದವರ ಬಗ್ಗೆ ಹಾಗೂ ಕಾದು ಸೋತವರ ಬಗ್ಗೆ ಕೇಳಿದ್ದೇವೆ. ಆ ಪೈಕಿ ಕೆಲವೇ ಪ್ರೇಮಿಗಳು ಕೊನೆಗೂ ಒಂದಾಗುವ ಅದೃಷ್ಟವನ್ನು ಪಡೆದಿರುತ್ತಾರೆ.

ಅಮೆರಿಕದ ಮಹಿಳೆಯೊಬ್ಬರು ರೈಲು ನಿಲ್ದಾಣವನ್ನೇ 36 ವರ್ಷಗಳಿಂದ ಪ್ರೇಮಿಸಿ ಕೊನೆಗೂ ಮದುವೆಯಾದ ವಿಚಿತ್ರ ಕತೆಯೊಂದು ಇಲ್ಲಿದೆ. ಕೊನೆಗೂ ಮದುವೆಯಾದರಲ್ಲ! ಅವರೇ ಅದೃಷ್ಟವಂತರು!

45 ವರ್ಷದ ಕ್ಯಾರಲ್ ಸಾಂಟಾ ಫೆ ಎಂಬವರು 36 ವರ್ಷಗಳಿಂದ ಕ್ಯಾಲಿಫೋರ್ನಿಯದ ಸಾಂಟಾ ಫೆ ರೈಲು ನಿಲ್ದಾಣವನ್ನು ಪ್ರೀತಿಸುತ್ತಿದ್ದರು. ಒಂಬತ್ತನೆ ವರ್ಷದಿಂದಲೇ ಅವರು ರೈಲು ನಿಲ್ದಾಣದ ಪ್ರೇಮ ಪಾಶಕ್ಕೆ ಬಿದ್ದಿದ್ದರಂತೆ.

2015ರಲ್ಲಿ ಅವರು ಕೊನೆಗೂ ಆ ರೈಲು ನಿಲ್ದಾಣವನ್ನು ಮದುವೆಯಾದರು. ಆ ಮದುವೆಯ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.

‘‘ಅವಳು (ರೈಲು ನಿಲ್ದಾಣ) ನನ್ನವಳು. ನಾನು ಅವಳ ರಾಜಕುಮಾರಿ. ಅವಳು ನನ್ನ ರಾಣಿ’’ ಎಂದು ವೀಡಿಯೊದಲ್ಲಿ ಕ್ಯಾರಲ್ ಹೇಳುವುದು ಕೇಳಿಸುತ್ತದೆ.

ಪ್ರತಿ ದಿನ ಕ್ಯಾರಲ್ 45 ನಿಮಿಷಗಳ ಬಸ್ ಪ್ರಯಾಣ ಮಾಡಿ ರೈಲು ನಿಲ್ದಾಣಕ್ಕೆ ಬಂದು ಕಾಲ ಕಳೆಯುತ್ತಾರೆ.

ಈ ವೀಡಿಯೊವನ್ನು 4,000 ಬಾರಿ ಶೇರ್ ಮಾಡಲಾಗಿದೆ ಹಾಗೂ 20ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News