ಹಫೀಝ್ ಸಯೀದ್ ಸಂಘಟನೆ 2018ರ ಚುನಾವಣೆಯಲ್ಲಿ ಕಣಕ್ಕೆ
Update: 2017-09-18 23:15 IST
ಲಾಹೋರ್, ಸೆ. 18: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್‌ನ ಜಮಾಅತ್ ಉದ್ ದಾವಾ ಸಂಘಟನೆಯು ಪಾಕಿಸ್ತಾನದ ರಾಜಕೀಯಕ್ಕೆ ಕಾಲಿರಿಸಲು ತೀರ್ಮಾನಿಸಿದೆ.
ಈ ಸಂಘಟನೆಯು 2018ರ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸಂಘಟನೆಯ ಸದಸ್ಯನೊಬ್ಬ ತಿಳಿಸಿದ್ದಾನೆ.
ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಅನರ್ಹತೆಯಿಂದ ತೆರವಾದ ಲಾಹೋರ್ ಸಂಸದೀಯ ಕ್ಷೇತ್ರಕ್ಕೆ ರವಿವಾರ ನಡೆದ ಉಪಚುನಾವಣೆಯಲ್ಲಿ ಈ ಸಂಘಟನೆಯು ಮೂರನೆ ಸ್ಥಾನ ಗಳಿಸಿರುವುದನ್ನು ಸ್ಮರಿಸಬಹುದಾಗಿದೆ.