ನಿರಾಶ್ರಿತರಿಗೆ ಟ್ರಂಪ್‌ರಿಂದ ಪರಿಹಾರದ ನಿರೀಕ್ಷೆಯಿಲ್ಲ: ಬಾಂಗ್ಲಾ ಪ್ರಧಾನಿ ಹಸೀನಾ ಶೇಖ್

Update: 2017-09-19 17:42 GMT

ನ್ಯೂಯಾರ್ಕ್, ಸೆ. 19: ಮ್ಯಾನ್ಮಾರ್‌ನಿಂದ ದೇಶಕ್ಕೆ ಪ್ರವಾಹೋಪಾದಿಯಲ್ಲಿ ವಲಸೆ ಬರುತ್ತಿರುವ ರೊಹಿಂಗ್ಯಾ ನಿರಾಶ್ರಿತರ ಬಗ್ಗೆ ತಾನು ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡಿದ್ದೇನೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಆದರೆ, ನಿರಾಶ್ರಿತರ ಬಗ್ಗೆ ತನಗೆ ಏನನಿಸುತ್ತದೆ ಎಂಬುದಾಗಿ ಟ್ರಂಪ್ ಸ್ಪಷ್ಟಪಡಿಸಿದ ಬಳಿಕ, ಅವರ ನೆರವಿನ ನಿರೀಕ್ಷೆಯನ್ನು ತಾನು ಹೊಂದಿಲ್ಲ ಎಂದಿದ್ದಾರೆ.

ವಿಶ್ವಸಂಸ್ಥೆಯ ಸುಧಾರಣೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಾನು ಏರ್ಪಡಿಸಿದ್ದ ಸಭೆಯ ಬಳಿಕ ಹೊರಟು ನಿಂತ ಟ್ರಂಪ್ ಜೊತೆ ತಾನು ಕೆಲವು ನಿಮಿಷ ಮಾತನಾಡಿದೆ ಎಂದರು.

 ‘‘‘ಬಾಂಗ್ಲಾದೇಶ ಹೇಗಿದೆ’ ಎಂದು ಅವರು ಕೇಳಿದರು. ಚೆನ್ನಾಗಿದೆ, ಆದರೆ, ಮ್ಯಾನ್ಮಾರ್‌ನಿಂದ ಬರುತ್ತಿರುವ ನಿರಾಶ್ರಿತರದೇ ಸಮಸ್ಯೆ ಎಂದು ನಾನು ಹೇಳಿದೆ. ಆದರೆ, ಅವರು ನಿರಾಶ್ರಿತರ ಬಗ್ಗೆ ಏನೂ ಹೇಳಲಿಲ್ಲ’’ ಎಂದು ‘ರಾಯ್ಟರ್ಸ್’ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News