ಎಚ್-1ಬಿ ವೀಸಾ ಕ್ಷಿಪ್ರ ಸಂಸ್ಕರಣೆ ಆರಂಭ

Update: 2017-09-19 18:00 GMT

ವಾಶಿಂಗ್ಟನ್, ಸೆ. 19: ಎಲ್ಲ ವರ್ಗಗಳ ಎಚ್-1ಬಿ ಉದ್ಯೋಗ ವೀಸಾಗಳ ಕ್ಷಿಪ್ರ ಸಂಸ್ಕರಣೆಯನ್ನು ಅಮೆರಿಕ ಪುನಾರಂಭಿಸಿದೆ. ಭಾರತೀಯ ಮಾಹಿತಿ ತಂತ್ರಜ್ಞಾನ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಈ ವೀಸಾಗಳನ್ನು ಕೋರಿ ಭಾರೀ ಸಂಖ್ಯೆಯಲ್ಲಿ ಸಲ್ಲಿಸಲ್ಪಟ್ಟಿರುವ ಅರ್ಜಿಗಳನ್ನು ನಿಭಾಯಿಸುವುದಕ್ಕಾಗಿ ಐದು ತಿಂಗಳ ಹಿಂದೆ ಅವುಗಳ ಸಂಸ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

2018ರ ಹಣಕಾಸು ವರ್ಷದ ಮಿತಿಗೊಳಪಟ್ಟು ಎಚ್-1ಬಿ ವೀಸಾಗಳ ಕ್ಷಿಪ್ರ ಸಂಸ್ಕರಣೆಯನ್ನು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ ಸೋಮವಾರದಿಂದ ಪುನಾರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News