ಭಾರತ-ಪಾಕ್ ವೈರತ್ವ ಕೊನೆಯಾಗಲಿ: ಮೆಹಬೂಬ ಮುಫ್ತಿ

Update: 2017-09-19 18:08 GMT

ಶ್ರೀನಗರ, ಸೆ.19: ಗಡಿಭಾಗದಲ್ಲಿ ಭಾರತ-ಪಾಕ್ ಮಧ್ಯೆ ಇರುವ ವೈರತ್ವದ ಪರಿಸ್ಥಿತಿಯಿಂದ ರಾಜ್ಯದ ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಶೀಘ್ರ ಉಭಯ ದೇಶಗಳ ನಡುವಿನ ಹಗೆತನದ ಭಾವನೆ ಕೊನೆಯಾಗಬೇಕು ಎಂದು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿಯಿರುವ ಟಾಂಗ್ಡರ್ ವಿಭಾಗದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಏಶ್ಯಾದ ಎರಡು ಪ್ರಮುಖ ರಾಷ್ಟ್ರಗಳ ಮಧ್ಯೆ ಶಾಂತಿ ನೆಲೆಸಿದರೆ ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಉಭಯ ದೇಶಗಳ ನಾಗರಿಕರು ಶಾಲೆ, ಆಸ್ಪತ್ರೆ, ಆಟದ ಮೈದಾನಗಳ ನಿರ್ಮಾಣವನ್ನು ಬಯಸುತ್ತಿದ್ದರೆ, ಅಲ್ಲಿ ಸೇನಾಪಡೆಯ ಬಂಕರ್‌ಗಳನ್ನು ನಿರ್ಮಾಣವಾಗುತ್ತಿರುವುದು ವಿಪರ್ಯಾಸವಾಗಿದೆ. ಈ 70 ವರ್ಷಗಳ ವೈರತ್ವದ ಸ್ಥಿತಿಯಿಂದ ಜನರಿಗೆ ಏನಾದರೂ ಪ್ರಾಪ್ತಿಯಾಗಿದೆಯೇ ಎಂಬುದನ್ನು ಯೋಚಿಸಬೇಕಿದೆ ಎಂದು ಮೆಹಬೂಬ ಹೇಳಿದರು.

ಕಾಶ್ಮೀರದ ಪಹರಿ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಈ ಕುರಿತು ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News