×
Ad

ತ್ರಿಪುರಾದಲ್ಲಿ ಬುಡಕಟ್ಟು ಪಕ್ಷದ ಕಾರ್ಯಕರ್ತರಿಂದ ಪತ್ರಕರ್ತನ ಹತ್ಯೆ

Update: 2017-09-20 21:14 IST

ಅಗರ್ತಲಾ,ಸೆ.20: ಪೂರ್ವ ತ್ರಿಪುರಾದ ಮಂಡೈ ಎಂಬಲ್ಲಿ ಬುಧವಾರ ಬುಡಕಟ್ಟು ಪಕ್ಷದ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಸ್ಥಳೀಯ ಟಿವಿ ವಾಹಿನಿಯ ಪತ್ರಕರ್ತನೋರ್ವ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದರು.

ಮಂಗಳವಾರ ರಾಜ್ಯಾದ್ಯಂತ ಸರಣಿ ಹಿಂಸಾತ್ಮಕ ದಾಳಿಗಳು ನಡೆದ ಬಳಿಕ ಬುಧವಾರ ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ(ಐಪಿಎಫ್‌ಟಿ) ಮತ್ತು ಸಿಪಿಎಂನ ಬುಡಕಟು ಘಟಕ ಟಿಆರ್‌ಯುಜಿಪಿಯ ಉದ್ರಿಕ್ತ ಕಾರ್ಯಕರ್ತರು ಮಂಡೈನಲ್ಲಿ ನಿಷೇಧಾಜೆಗಳನ್ನು ಉಲ್ಲಂಘಿಸಿ ಸಮಾವೇಶಗೊಂಡಿದ್ದರು. ಪೊಲೀಸರು ಜನರನ್ನು ಚದುರಿದಲು ಲಾಠಿ ಪ್ರಹಾರ ನಡೆಸಿದ್ದು,ಈ ವೇಳೆ ಐಪಿಎಫ್‌ಟಿ ಕಾರ್ಯಕರ್ತರು ಪತ್ರಕರ್ತ ಶಂತನು ಭೌಮಿಕ್ ಅವರ ಹತ್ಯೆಯನು ನಡೆಸಿದ್ದರ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು. ಭೌಮಿಕ್ ಅಲ್ಲಿಯ ಬೆಳವನಿಗೆಗಳನ್ನು ವರದಿ ಮಾಡಲು ತನ್ನ ಸಹೋದ್ಯೋಗಿಗಳೊಂದಿಗೆ ತೆರಳಿದ್ದರು.
ಘಟನೆಗೆ ಸಂಬಂಧಿಸಿದಂತೆ ನಾಲ್ವರು ಐಪಿಎಫ್‌ಟಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News