×
Ad

ಭ್ರಷ್ಟಾಚಾರ ಆರೋಪ: ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನಿವಾಸಕ್ಕೆ ಸಿಬಿಐ ದಾಳಿ

Update: 2017-09-20 22:00 IST

ಹೊಸದಿಲ್ಲಿ,ಸೆ.20: ಖಾಸಗಿ ವೈದ್ಯಕೀಯ ಕಾಲೇಜೊಂದನ್ನು ನಿಷೇಧಿಸಿ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯು ಹೊರಡಿಸಿದ್ದ ಆದೇಶವನ್ನು ಕಾಲೇಜಿನ ಪರವಾಗಿ ಇತ್ಯರ್ಥಗೊಳಿಸಲು ಪಿತೂರಿ ನಡೆಸಿದ್ದಕ್ಕಾಗಿ ಸಿಬಿಐ ಒಡಿಶಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಐ.ಎಂ.ಖುದ್ದೂಸಿ ಮತ್ತು ಇತರ ಐವರ ವಿರುದ್ಧ ಕ್ರಿಮಿನಲ್ ಒಳಸಂಚು ಮತ್ತು ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಖುದ್ದೂಸಿಯವರು ಓರ್ವ ಮಹಿಳೆ ಸೇರಿದಂತೆ ದಿಲ್ಲಿಯ ಕೆಲವು ಮಧ್ಯವರ್ತಿಗಳ ಸಹಾಯದೊಂದಿಗೆ ಖಾಸಗಿ ವೈದ್ಯಕೀಯ ಕಾಲೇಜಿನ ಪದಾಧಿಕಾರಿಗಳಿಗೆ ಕಾನೂನು ಮಾರ್ಗದರ್ಶನ ನೀಡಿದ್ದರಲ್ಲದೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಅವರ ಪರವಾಗಿ ತೀರ್ಪು ಹೊರಬೀಳುವಂತೆ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡಗಳು ಬುಧವಾರ ಖುದ್ದೂಸಿಯವರ ಇಲ್ಲಿಯ ಗ್ರೇಟರ್ ಕೈಲಾಷ್ ನಿವಾಸ ಸೇರಿದಂತೆ ದಿಲ್ಲಿ, ಭುವನೇಶ್ವರ ಮತ್ತು ಲಕ್ನೋಗಳಲ್ಲಿ ದಾಳಿಗಳನ್ನು ನಡೆಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News